Skip to main content


ಕನ್ನಡ ಸುದ್ದಿ ವಾಹಿನಿಗಳಲ್ಲಿ ಅಮಿತ್ ಶಾ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೆಚ್ಚಾಗಿ ರಾಷ್ಟ್ರೀಯ ಖಾಸಗಿ ಸುದ್ದಿ ವಾಹಿನಿಗಳಿಗೇ ಸಂದರ್ಶನ ನೀಡುವುದು ಕಮ್ಮಿ. ಅಂತದರಲ್ಲಿ ಎರಡೆರಡು ಕನ್ನಡ ಖಾಸಗಿ ಸುದ್ದಿವಾಹಿನಿಗಳಿಗೆ ಸಂದರ್ಶನ ನೀಡಿ ಹೋಗಿದ್ದಾರೆ. ಇದಕ್ಕೆ ಕಾರಣ ಸ್ಪಷ್ಟ. ಕರ್ನಾಟಕ ವಿಧಾನಸಭಾ ಚುನಾವಣೆ. ಎರಡೂ ಸುದ್ದಿವಾಹಿನಿಗಳ ಸಂದರ್ಶನದ ವೇಳೆ ಅಮಿತ್ ಶಾ ಅತ್ಯಂತ ಭರವಸೆಯಿಂದ ಹೇಳಿದ್ದು, ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು. ಇದೆಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಸುದ್ದಿವಾಹಿನಿಗಳ ಸಂದರ್ಶನದಲ್ಲಿ ಭಾಗವಹಿಸಿ, ಇಲ್ಲಿನ ಮತದಾರರನ್ನು ತಲುಪುವ 'ತಂತ್ರಗಾರಿಕೆ'ಯ ಕೆಲಸವನ್ನು ಶಾ ಮಾಡಿದ್ದಾರೆ.   
short by NP / read more at One India