ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ ಗಳಿಂದ ಸೋತಿರುವುದು ಗೊತ್ತೇ ಇದೆ. 205 ರನ್ ಗಳ ಬೃಹತ್ ಮೊತ್ತವನ್ನು ದಾಖಲಿಸಿದ್ದರೂ ಆ ಸ್ಕೋರನ್ನು ಸಮರ್ಥಿಸಿಕೊಳ್ಳಲು ಆರ್ ಸಿಬಿ ಸಾಧ್ಯವಾಗಿಲ್ಲ. ಪಂದ್ಯದ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತಾಡಿದ ಆರ್ ಸಿಬಿ ನಾಯಕ ಕೊಹ್ಲಿ , ಧೋನಿ ಸಿಡಿಸುವ ಸಿಕ್ಸರ್ ನೋಡಲು ಸಂತೋಷವಾಗುತ್ತೆ. ಆದರೆ, ನಮ್ಮ ವಿರುದ್ಧ ಹೊಡೆದಾಗ ಮಾತ್ರ ಆಗಲ್ಲ. ಧೋನಿ ಬ್ಯಾಟಿಂಗ್ ಮಾಡೋದನ್ನು ನೋಡುವುದನ್ನು ತಾನು ಆನಂದಿಸ್ತೀನಿ ಎಂದು ಟೀಂ ಇಂಡಿಯಾದ ನಾಯಕ ಕೊಹ್ಲಿ, ಮಾಜಿ ನಾಯಕ ಧೋನಿಯ ಬ್ಯಾಟಿಂಗ್ ಗೆ ತಲೆದೂಗಿದ್ದಾರೆ.
short by Prajwal / read more at Newspoint
Comments
Post a Comment