Skip to main content


ಸರಿಗಮಪ ಶೂಟಿಂಗ್ ನಲ್ಲಿ ಅಸ್ವಸ್ಥರಾದ ಹಂಸಲೇಖ ಆಸ್ಪತ್ರೆಗೆ ದಾಖಲು

ಖಾಸಗಿ ವಾಹಿನಿಯ ಸರಿಗಮಪ ಕಾರ್ಯಕ್ರಮದ ಚಿತ್ರೀಕರಣದ ವೇಳೆ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.ಸತತ ಪ್ರಯಾಣದಿಂದ ಬಳಲಿದ್ದ ಅವರಿಗೆ ಕಾಲಿನ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಕನ್ನಿಂಗ್ ಹ್ಯಾಂ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಮೊದಲಿಗೆ ಗ್ಯಾಸ್ಟಿಕ್ ಸಮಸ್ಯೆಯಿಂದಾಗಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತಾದರೂ, ಅವರಿಗೆ ಕಾಲು ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.2 ದಿನ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ. ಸುದೀರ್ಘ ಪ್ರಯಾಣದಿಂದ ಅವರು ಬಳಲಿದ್ದ ಕಾರಣ ನೋವು ಕಾಣಿಸಿಕೊಂಡಿದೆ. ಹಂಸಲೇಖ ಅವರು ಆರೋಗ್ಯವಾಗಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

short by: Nithin / Read more at Kannadadunia

Comments