Skip to main content


ಯಶ್ ಚಿತ್ರಕ್ಕಾಗಿ ಸಿದ್ದವಾಯ್ತು '80' ರ ದಶಕದ ಸೆಟ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ ಜಿ ಎಫ್' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾತಂಡ ಎಲ್ಲಾ ಕೆಲಸಗಳನ್ನ ಬದಿಗಿಟ್ಟು ಚಿತ್ರದ ಕೊನೆಯ ಹಂತದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದೆ. ಬೆಂಗಳೂರಿನ ಮಿನರ್ವಾ ಮಿಲ್ ನಲ್ಲಿ ಚಿತ್ರಕ್ಕಾಗಿ ಅದ್ಧೂರಿ ಸೆಟ್ ರೆಡಿಯಾಗಿದ್ದು ಯಶ್ ಅವರ ಇಂಟ್ರಡಕ್ಷನ್ ಸಾಂಗ್ ಶೂಟ್ ಆಗುತ್ತಿದೆ. ರಾಕಿಂಗ್ ಸ್ಟಾರ್ ಸಿನಿಮಾಗಳಲ್ಲಿ ಹಾಡುಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅದೇ ರೀತಿಯಲ್ಲಿ ಕೆ ಜಿ ಎಫ್ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಸ್ಪೆಷಲ್ ಆಗಿರುವ ಸೆಟ್ ಹಾಕಲಾಗಿದೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಲು ಹಗಲು ರಾತ್ರಿ ಶ್ರಮ ಪಡುತ್ತಿದೆ.

short by Pawan / read more at 60secondsnow


Comments