Skip to main content


ಮಾವನಿಗೆ ಟಿಕೆಟ್​ ಕೈ ತಪ್ಪಿದ್ದಕ್ಕೆ ಅಮೂಲ್ಯ ಹೇಳಿದ್ದೇನು?

ಬಿಜೆಪಿ ಅಭ್ಯರ್ಥಿಗಳ ಪರ ಸ್ಯಾಂಡಲ್​ವುಡ್​ ತಾರೆ ಅಮೂಲ್ಯ ಮತ ಪ್ರಚಾರಕ್ಕೆ ಇಳಿಯುತ್ತಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದ ಹಿನ್ನಲೆಯಲ್ಲಿ. ಅಮೂಲ್ಯ ತಮ್ಮ ಮಾವನ ಪರ ಚುನಾವಣ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿಗಳು ಸಹ ಹರಿದಾಡಿದವು. ಅವರು ತಮ್ಮ ಮಾವ ರಾಮಚಂದ್ರ ಅವರಿಗೆ ಟಿಕೆಟ್​ ಖಚಿತವೆಂದು ಭಾವಿಸಿ ದ್ದರು. ಆದರೆ ರಾಮಚಂದ್ರ ಅವರಿಗೆ ಟಿಕೆಟ್​ ಕೈ ತಪ್ಪಿ ಹೋಗಿದೆ. ರಾಜ ರಾಜೇಶ್ವರಿ ಕ್ಷೇತ್ರದಲ್ಲಿ ಟಿಕೆಟ್​ ಆಕಾಂಕ್ಷಿ ರಾಮಚಂದ್ರ ಅವರು ಪತ್ರಿಕಾ ಗೋಷ್ಟಿ ನಡೆಸಿ ನನಗೆ ಸಂತೋಷ್​ ಜಿ ಅವರಿಂದ ಟಿಕೆಟ್​ ಕೈ ತಪ್ಪಿದೆ. ಎರಡು ದಿನಗಳಲ್ಲಿ ಟಿಕೆಟ್​ ನೀಡದಿದ್ದರೆ ಪಕ್ಷ ತೊರೆದು ಪಕ್ಷೇತರರವಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಎಚ್ಚರಿಸಿದ್ದಾರೆ. ತಮ್ಮ ಮಾವನಿಗೆ ಟಿಕೆಟ್​ ತಪ್ಪಿದ್ದಕ್ಕೆ ನನಗೆ ಬೇಸರವಾಗಿದೆ. ಈ ಬಾರಿ ಟಿಕೆಟ್​ ನೀಡ ಬೇಕಿತ್ತು. ನಮ್ಮ ಮಾವ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರ ಶ್ರಮಕ್ಕೆ ಬೆಲೆ ಸಿಗಬೇಕು ಅಂದರೆ ಟಿಕೆಟ್​ ನೀಡಬೇಕು ಅವರ ನಿರ್ಧಾರವನ್ನು ನಾವ ಸಹ ಬೆಂಬಲಿಸುತ್ತೇವೆ ಎಂದರು.   

short by Pawan / read more at Bp9news

Comments