Skip to main content


ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಹಿಂದಿ ರೀಮೇಕ್ ಅಧಿಕೃತ

2016ರಲ್ಲಿ ತೆರೆಕಂಡಿದ್ದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ವರ್ಷದ ಸೂಪರ್ ಹಿಟ್ ಸಿನಿಮಾ ಆಗಿತ್ತು. ಬಾಕ್ಸ್ ಆಫೀಸ್ ನಲ್ಲೂ ಅಷ್ಟೇ ಬಿಸ್ ನೆಸ್ ಕೂಡ ಮಾಡಿತ್ತು. ಕನ್ನಡದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಈ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ರೀಮೇಕ್ ಆಗಲಿದೆ ಎನ್ನಲಾಗಿತ್ತು. ಆಗ ಅದು ಖಚಿತವಾಗಿರಲಿಲ್ಲ. ಆದ್ರೀಗ, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಹಿಂದಿ ರೀಮೇಕ್ ಸುದ್ದಿ ಖಚಿತ ಮತ್ತು ಅಧಿಕೃತವಾಗಿದೆ. ಸ್ವತಃ ರಕ್ಷಿತ್ ಶೆಟ್ಟಿ ಅವರೇ ಈ ಸುದ್ದಿಯನ್ನ ಕನ್ ಫರ್ಮ್ ಮಾಡಿದ್ದು, ಫೇಸ್ ಬುಕ್ ನಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

short by : Nithin / read more at 60secondsnow

Comments