Skip to main content


ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿ ಹರಿಪ್ರಿಯಾ

ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದರೆ ಶಂಕರ್ ಅವರ ಮೊದಲ ಚಿತ್ರ ಎಂಟಿವಿ ಸುಬ್ಬಲಕ್ಷ್ಮಿಯಾಗಬೇಕಿತ್ತು. ಆದರೆ ಆ ಚಿತ್ರ ಅರ್ಧದಲ್ಲಿ ನಿಂತಿದೆ. ಹೀಗಾಗಿ ಹರಿಪ್ರಿಯಾ ಅವರ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕಳೆದ ಶನಿವಾರ ಚಿತ್ರದ ಮುಹೂರ್ತ ನೆರವೇರಿತು. ಈ ತಿಂಗಳ ಮಧ್ಯಭಾಗದಿಂದ ಶೂಟಿಂಗ್ ಆರಂಭವಾಗಲಿದೆ. ಈ ಮಧ್ಯೆ ಚಿತ್ರದ ಕಲಾವಿದರನ್ನು ನಿರ್ದೇಶಕರು ಅಂತಿಮಗೊಳಿಸಲಿದ್ದಾರೆ. ಬೆಲ್ ಬಾಟಮ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಹರಿಪ್ರಿಯಾ ಅವರ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.     

short by Pawan / read more at Kannada Prabha

Comments