Skip to main content


ಬಂದಿದೆ ವಾಟ್ಸ್ಆಪ್ ಫೇಕ್ ಆಪ್: ಎಚ್ಚರ..!

ವಾಟ್ಸ್ಆಪ್ ಪ್ಲಸ್ ಪ್ಲೇ ಸ್ಟೋರ್ ಮತ್ತು ವೆಬ್ ನಲ್ಲಿ ಬಳಕೆಗೆ ಮುಕ್ತವಾಗಿದ್ದು, ಇದರೊಂದಿಗೆ ವಾಟ್ಸ್ಆಪ್ ಗೋಲ್ಡ್ ಸಹ ಬಳಕೆಗೆ ದೊರೆಯುತ್ತಿದೆ. ಆದರೆ ಈ ಆಪ್ ಗಳೇಲ್ಲವು ಫೇಕ್ ಆಗಿದ್ದು, ವಾಟ್ಸ್ಆಪ್ ಬೇರೆ ಯಾವುದೇ ಆಪ್ ಗಳನ್ನು ಲಾಂಚ್ ಮಾಡಿಲ್ಲ. ಬಿಸ್ನೆಸ್ ಆಪ್ ವೊಂದನ್ನು ಬಿಟ್ಟರೆ ಉಳಿದ ಯಾವುದೇ ಆಪ್ ಗಳು ವಾಟ್ಸ್ ಆಪ್ ಒಡೆತನಕ್ಕೆ ಸೇರಿರುವುದಲ್ಲ. ಇದೊಂದು ಆಡ್ ವೇರ್ ಮತ್ತು ಮಾಲ್ವೇರ್ ಹೊಂದಿರುವ ಆಪ್ ಆಗಿದ್ದು, ಇದನ್ನು ಇನ್ ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಆಡ್ ಗಳು ತುಂಬಿಕೊಳ್ಳಲಿವೆ, ಅಲ್ಲದೇ ನಿಮ್ಮ ಅರಿವೆ ಬಾರದಂತೆ ಹ್ಯಾಕರ್ಸ್ ನಿಮ್ಮ ಸ್ಮಾರ್ಟ್ಫೋನ್ ಎಂಟ್ರಿ ಪಡೆದು ನಿಮಗೆ ನಷ್ಟವನ್ನು ಮಾಡಲಿದ್ದಾರೆ. ಹಾಗಾಗಿ ಈ ಫೇಕ್ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಾರದು. ಎಚ್ಚರ ವಹಿಸುವುದು ಅಗತ್ಯ.

short by: Sp / read more at Gizbot