Skip to main content


'ಪರಮಾಣು' ವಿವಾದ : ಪ್ರೇರಣಾ ವಿರುದ್ಧ ಠಾಣೆ ಮೆಟ್ಟೆಲೇರಿದ ನಟ ಜಾನ್ ಅಬ್ರಾಹಂ

ಪ್ರೇರಣಾ ಅವರ 'ಕ್ರಿರಿಜ್ ಮನರಂಜನೆ' ಸಂಸ್ಥೆಯ ವಿರುದ್ಧ ವಂಚನೆ ಹಾಗೂ  ನಂಬಿಕೆ ದ್ರೋಹ  ಪ್ರಕರಣಗಳನ್ನು ದಾಖಲಿಸಿದ್ದಾರೆ. 'ಪರಮಾಣು' ಚಿತ್ರದ ಒಪ್ಪಂದದ ಪ್ರಕಾರ ನಟರ ಸಂಭಾವನೆ, ಜಾಹೀರಾತು ಖರ್ಚು ಸೇರಿದಂತೆ 35 ಕೋಟಿ ರೂ, ಕಿರಿಜ್‌ ಸಂಸ್ಥೆಯು ಜೆಎ ಸಂಸ್ಥೆಗೆ ನೀಡಬೇಕಿತ್ತು. ಆದರೆ, ಪ್ರೇರಣಾ ಅವರು ದುಡ್ಡು ನೀಡುವಲ್ಲಿ ವಿಳಂಬ ಮಾಡಿದ್ದಾರೆ. ಒಪ್ಪಂದ ಮುರಿದು ಬಿದ್ದ ಬಳಿಕ ಪ್ರೇರಣಾ ಅವರು ಜಾನ್ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಜತೆಗೆ ಮಾಧ್ಯಮಗಳಲ್ಲಿ ಅವರ ವಿರುದ್ಧ ಅವಹೇಳನಕಾರಿ ಕಮೆಂಟ್ ನೀಡಿದ್ದರು. ಇದು ಜಾನ್ ಅಬ್ರಾಹಂ ಅವರ ಗಮನಕ್ಕೆ ಬಂದಿದ್ದು, ಇದೀಗ ಅವರು ಪ್ರೇರಣಾ ವಿರುದ್ಧ ಮುಂಬೈನ ಖೇರ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.            

short by Pawan / read more at Eenadu India

Comments