Skip to main content


ವ್ಯಾಟ್ಸನ್ ಭರ್ಜರಿ ಶತಕ: ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈಗೆ ಜಯ!

ಪುಣೆಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ ಚೆನ್ನೈ ತಂಡ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ವ್ಯಾಟ್ಸನ್ (106) ಮತ್ತು ಸುರೇಶ್ ರೈನಾ (46) ರನ್ ನೆರವಿನೊಂದಿಗೆ 204 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಚೆನ್ನೈ ಪರ ವ್ಯಾಟ್ಸನ್ ಮಿಂಚಿನ ಶತಕಗಳಿಸಿ ಎಲ್ಲರ ಗಮನ ಸೆಳೆದರು. ಇವರಿಗೆ ರೈನಾ ಉತ್ತಮ ಸಾಥ್ ನೀಡಿದರು. ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ 18.3 ಓವರ್ ಗಳಲ್ಲಿ ಕೇವಲ 140 ರನ್ ಗಳಿಗೆ ಸರ್ವಪತನ ಕಂಡಿತು. ರಾಜಸ್ಥಾನ ಪರ ಸ್ಟೋಕ್ಸ್ (45) ಹೊರತುಪಡಿಸಿ ಯಾವೊಬ್ಬ ಆಟಗಾರನೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.           

short by Prajwal / read more at Dailyhunt

Comments