Skip to main content


ಕ್ರಿಸ್‌ ಗೇಲ್ ಅಬ್ಬರ: ಪಂಜಾಬ್‌ ಜಯಭೇರಿ

ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಕ್ರಿಸ್‌ ಗೇಲ್ ಸಿಡಿಲಬ್ಬರದ ಬ್ಯಾಟಿಂಗ್‌ ಮುಂದೆ ಗುರುವಾರ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬೌಲರ್‌ಗಳು ಬಸವಳಿದರು. ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಶತಕ ದಾಖಲಿಸಿದರು. 63 ಎಸೆತಗಳಲ್ಲಿ ಔಟಾಗದೆ 104 ರನ್ ಗಳಿಸಿದ ಅವರು 11 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಟೂರ್ನಿಯ ಮೊದಲ ಶತಕ ಇದಾಗಿದೆ. ಅವರ ಆಟದ ಬಲದಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 15 ರನ್‌ಗಳಿಂದ ಗೆದ್ದಿತು. 194 ರನ್‌ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ 178 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕ ಕೇನ್‌ ವಿಲಿಯಮ್ಸನ್ (54; 41 ಎ, 2 ಸಿ, 3 ಬೌಂ) ಮತ್ತು ಕರ್ನಾಟಕದ ಮನೀಷ್ ಪಾಂಡೆ (57; 42 ಎ, 1 ಸಿ, 3 ಬೌಂ) ಅವರ ಅರ್ಧಶತಕದ ಆಟ ವ್ಯರ್ಥವಾಯಿತು.            

Short by Prajwal / read more at Prajavani

Comments