Skip to main content


ರಾಜಮೌಳಿ ಮತ್ತು ನಿಖಿಲ್ ಬಗ್ಗೆ ಹೊರಬಿತ್ತು ರೋಚಕ ಸುದ್ದಿ.!

ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಜೆಡಿಎಸ್ ರಾಜ್ಯಾದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ನಿಖಿಲ್ ಕುಮಾರ್ ಸ್ವಾಮಿ ಕೂಡ ಸುದೀಪ್ ಜೊತೆಯಲ್ಲಿದ್ದರು. ಹೀಗಾಗಿ, ಈ ಭೇಟಿಯ ಬಗ್ಗೆ ದೊಡ್ಡ ಮಟ್ಟದ ಕುತೂಹಲ ಇತ್ತು. ಈ ಸಂದರ್ಭದಲ್ಲಿ ನಿಖಿಲ್ ಗಾಗಿ ರಾಜಮೌಳಿ ಸಿನೆಮಾ ಮಾಡುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಇದರ ಪರಿಣಾಮ ತೆಲುಗು ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸ್ ನಿಖಿಲ್ ಕುಮಾರ್ ಅವರ ಬಗ್ಗೆ ಟ್ವಿಟ್ಟರ್ ನಲ್ಲಿ ಚರ್ಚೆಯಾಗ್ತಿದೆ. ನಿಖಿಲ್ ಕುಮಾರ್ ಅವರ ಫ್ಯಾನ್ಸ್ ಕ್ಲಬ್ ಗಳೇ ಈ ಸುದ್ದಿಯ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

short by Pawan / read more at Filmibeat