Skip to main content


ಟ್ವಿಟರ್‌ನಲ್ಲಿ ಆರ್‌ಸಿಬಿಗೆ ಮಂಗಳಾರತಿ!

'ಈ ಸಲದ ಐಪಿಎಲ್‌ನಲ್ಲಿ ಕೆ.ಎಲ್.ರಾಹುಲ್ ಅತಿ ವೇಗದ ಆರ್ಧಶತಕ ದಾಖಲಿಸಿದರು. ಕ್ರಿಸ್‌ ಗೇಲ್ ಟೂರ್ನಿಯ ಮೊದಲ ಶತಕ ಗಳಿಸಿದರು. ಶೇನ್ ವಾಟ್ಸನ್‌ ಕೂಡ ಶತಕ ಗಳಿಸಿದರು. ಆದರೆ ಆರ್‌ಸಿಬಿ....!!' ಈ ಮೂವರು ಆಟಗಾರರನ್ನು ಈ ಸಲದ ಬಿಡ್‌ನಲ್ಲಿ ತನ್ನಲ್ಲಿ ಉಳಿಸಿಕೊಳ್ಳದ ಆರ್‌ಸಿಬಿ ತಂಡವನ್ನು ಟ್ವಿಟರ್‌ನಲ್ಲಿ ಅಭಿಮಾನಿಗಳು ಈ ರೀತಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮೂವರು ಆಟಗಾರರೂ ಹೋದ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದರು. ಟೂರ್ನಿಯ ಮೊದಲ ಪಂದ್ಯದಲ್ಲಿ ರಾಹುಲ್ ವೇಗದ ಅರ್ಧಶತಕ ದಾಖಲಿಸಿದ್ದರು. ಹೋದ ಗುರುವಾರ ಗೇಲ್ ಮತ್ತು ಶುಕ್ರವಾರ ವಾಟ್ಸನ್‌ ಶತಕ ಹೊಡೆದಿದ್ದರು. ಆದರೆ ಆರ್‌ಸಿಬಿ ತಂಡವು ಕಳೆದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತಿದೆ. ಬ್ರೆಂಡನ್ ಮೆಕ್ಲಮ್, ಸರ್ಫರಾಜ್ ಖಾನ್ ಅವರು ವೈಫಲ್ಯ ಅನುಭವಿಸುತ್ತಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅದಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿಯನ್ನು ಟೀಕಿಸುವ ಸಂದೇಶಗಳು ಸಾಲುಗಟ್ಟಿವೆ.

short by Prajwal / more at Dailyhunt

Comments