ಅಫ್ಘಾನಿಸ್ತಾನದ ಎದುರು ಜೂನ್ 14ರಿಂದ ಆರಂಭವಾಗುವ ಏಕೈಕ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ವಿರಾಟ್ ಕೊಹ್ಲಿಯೇ ಮುನ್ನಡೆಸಬೇಕು ಎಂದು ಬಿಸಿಸಿಐ ಬಯಸಿರುವ ಕಾರಣ ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ತನ್ನ ನಿರ್ಧಾರವನ್ನು ಕೊಹ್ಲಿ ಮರುಪರಿಶೀಲಿಸುವ ಅನಿವಾರ್ಯತೆ ಯಿದೆ ಎನ್ನಲಾಗಿದೆ. ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅಲ್ಲಿಯ ಪರಿಸ್ಥಿತಿಗೆ ಹೊಂದಿಕೊಳ್ಳುವ ಉದ್ದೇಶದಿಂದ ಭಾರತದ ಟೆಸ್ಟ್ ಸ್ಪೆಷಲಿಸ್ಟ್ (ಟೆಸ್ಟ್ ತಜ್ಞ) ಆಟಗಾರರು ಇಂಗ್ಲೆಂಡಿನಲ್ಲಿ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಬಗ್ಗೆ ಬಿಸಿಸಿಐಗೆ ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತಗಾರರ ಸಮಿತಿ(ಸಿಒಎ) ಒಲವು ಹೊಂದಿದೆ. ಆದರೆ ಸಿಒಎ ನಿಲುವಿಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ. ಕೊಹ್ಲಿ ಅಪಘಾನಿಸ್ತಾನದ ಎದುರಿನ ಟೆಸ್ಟ್ ಪಂದ್ಯದಿಂದ ಹೊರಗುಳಿದರೆ ಇದು ಎದುರಾಳಿ ತಂಡಕ್ಕೆ ಅಗೌರವ ತೋರಿಸಿದಂತೆ ಆಗುವುದಲ್ಲದೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂಬುದು ಬಿಸಿಸಿಐ ನಿಲುವಾಗಿದೆ.
short by Prajwal / more at Newspoint
The (r)Evolution Of Entertainment Media
Comments
Post a Comment