Skip to main content


ಪವರ್‌ಪುಲ್ ತ್ರಿಪಾತ್ರಾಭಿನಯದಲ್ಲಿ ಆಲಿಯಾ ಭಟ್

ಬಾಲಿವುಡ್‍ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬೆಡಗಿ ಆಲಿಯಾ ಭಟ್. ಜಂಗ್ಲಿ ಪಿಕ್ಚರ್ಸ್ ಮತ್ತು ಧರ್ಮ ಪ್ರೊಡಕ್ಷನ್ಸ್‌ ಜಂಟಿ ನಿರ್ಮಾಣದ 'ರಾಝಿ' ಚಿತ್ರದಲ್ಲಿ ಅತ್ಯಮೋಘ ಪಾತ್ರಗಳ ಮೂಲಕ ಆಲಿಯಾ ಪ್ರೇಕ್ಷಕರನ್ನು ರಂಜಿಸಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ 'ರಾಝಿ' ಚಿತ್ರತಂಡ ಸಾಕಷ್ಟು ಹವಾ ಎಬ್ಬಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರೀ-ಟ್ರೈಲರ್ ವೀಡಿಯೋ ಆಲಿಯಾ ಪಾತ್ರದ ಝಲಕ್ ನೀಡಿತ್ತು. ಇದೀಗ ಚಿತ್ರದ ಮೂರು ಪೋಸ್ಟರ್‌ಗಳು ರಿಲೀಸ್ ಆಗಿದ್ದು, ಒಂದಕ್ಕಿಂತ ಒಂದು ಭಿನ್ನವಾಗಿದ್ದು ಆಲಿಯಾರನ್ನು ಮೂರು ಭಿನ್ನ ಕೋನಗಳಲ್ಲಿ ಕಾಣಬಹುದು. ಬಾಲಿವುಡ್‌ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಈ ಚಿತ್ರ ಮೇ 11, 2018ಕ್ಕೆ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ.    

short by Pawan / read more at Vijayakarnataka

Comments