Skip to main content


ಬ್ರೇಕಿಂಗ್: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಸೈನಾ

ಅನುಭವಿ ಆಟಗಾರ್ತಿ ಸೈನಾ ನೇಹವಾಲ್‌ ಆಕ್ರಮಣಕಾರಿ ಆಟವಾಡಿ ಮಲೇಷ್ಯಾ ವಿರುದ್ಧ ಜಯಗಳಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.ಮಿಕ್ಸೆಡ್‌ ಟೀಮ್‌ ಫೈನಲ್‌ ಪಂದ್ಯದಲ್ಲಿ ಅತ್ಯಂತ ಅದ್ಭುತ ಪ್ರದರ್ಶನ ಹಾಗೂ ಹೋರಾಟದ ಆಟವನ್ನು ಪ್ರದರ್ಶಿಸಿ ಮಲೇಷ್ಯಾದ ಸೋನಿಯಾ ಚಿಯಾ ವಿರುದ್ಧ ಜಯಗಳಿಸಿದರು. ಮೊದಲ ಸೆಟ್‌ 21-11ರಲ್ಲಿ ಗೆದ್ದ ಸೈನಾ ನೇಹವಾಲ್‌ ಎರಡನೇ ಸೆಟ್‌ ಅನ್ನು 19-21ರಲ್ಲಿ ಸೋತರು.ಮೂರನೇ ಸೆಟ್‌ನಲ್ಲಿ ಆಕ್ರಮಣಕಾರಿ ಆಟವಾಡುವ ಮೂಲಕ ಸೈನಾ ನೇಹವಾಲ್‌ ಎದುರಾಳಿಗೆ ಚೇತರಿಸಿಕೊಳ್ಳಲು ಅವಕಾಶವನ್ನು ನಿಡಲೇ ಇಲ್ಲ.ಮಿಕ್ಸೆಡ್‌ ಟೀಮ್‌ ವಿಭಾಗದಲ್ಲಿ ಭಾರತ 3-1 ಅಂತರದಲ್ಲಿ ಜಯ ಗಳಿಸಿ ಪದಕವನ್ನು ಕೊರಳಿಗೇರಿಸಿಕೊಂಡಿತು.

short by : Nithin / read more at Kannadanewsnow

Comments