Skip to main content


ಉದಯ್ ಮತ್ತು ಅನಿಲ್ ನಿಜಕ್ಕೂ ಪ್ರೇತಗಳಾದರಾ? ಮೀನುಗಾರರು ಬಿಚ್ಚಿಟ್ಟ ಬೆಚ್ಚಿ ಬೀಳಿಸೋ ವಿಚಾರ!!

ಕನ್ನಡದ ಯುವ ನಟರಾಗಿದ್ದ ಅನಿಲ್ ಹಾಗೂ ಉದಯ್ ದುರಂತ ಅಂತ್ಯ ಕಂಡು ವರ್ಷ ಕಳೆದಿದೆ. ಇಂಥಾ ಪ್ರತಿಭಾವಂತ ನಟರಿಬ್ಬರನ್ನು ಕಳೆದುಕೊಂಡ ನೋವು ಕನ್ನಡಿಗರ ಮನದಲ್ಲಿನ್ನೂ ಹಸಿರಾಗಿದೆ. ಅವರಿಬ್ಬರ ಮನೆಗಳಲ್ಲಿಯೂ ದುಃಖದ ಉಪಸ್ಥಿತಿ ಹಾಗೆಯೇ ಮುಂದುವರೆದಿದೆ. ಈ ಹೊತ್ತಿನಲ್ಲಿ ಇವರಿಬ್ಬರನ್ನು ಬಲಿ ತೆಗೆದುಕೊಂಡ ತಿಪ್ಪಗೊಂಡನಹಳ್ಳಿ ಜಲಾಶಯದ ಸುತ್ತಮುತ್ತ ಥರ ಥರದ ಸುದ್ದಿಗಳು ಹರಿದಾಡುತ್ತಿವೆ. ವರ್ಷದ ಹಿಂದೆ ಸತ್ತಿದ್ದ ಚಿತ್ರ ನಟರಿಬ್ಬರು ದೆವ್ವವಾಗಿ ಕಾಡುತ್ತಿದ್ದಾರೆಂಬ ವಿಚಾರ ಮೀನುಗಾರರ ವಲಯದಿಂದ ಹೊರ ಬಿದ್ದು ಸುತ್ತೆಲ್ಲ ಹರಡಿಕೊಂಡಿದೆ. ಅಷ್ಟಕ್ಕೂ ಕರ್ನಾಟಕದ ಕುಖ್ಯಾತ ಸೂಸೈಡ್ ಸ್ಪಾಟ್ ಎಂದೇ ಹೆಸರಾಗಿರುವ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಹೆಣ ಬೀಳೋದೇನು ಹೊಸತಲ್ಲ. ದೆವ್ವ ಭೂತಗಳ ಬಗ್ಗೆ ರಂಗುರಂಗಾದ ಕಥೆ ಹುಟ್ಟಿಕೊಳ್ಳುವುದೂ ಕೂಡಾ ಮಾಮೂಲು. ಆದರೆ ಅನಿಲ್ ಮತ್ತು ಉದಯ್ ಸತ್ತು ಆರು ತಿಂಗಳೀಚೆಗೆ ನಡೆಯುತ್ತಿರೋ ವಿದ್ಯಮಾನಗಳು, ಅಂದರೆ ಆ ಭಾಗದ ಮೀನುಗಾರರು ಆ ಪ್ರದೇಶದಲ್ಲಿ ಯಾವುದೇ ಪಾರ್ಟಿ ಏರ್ಪಡಿಸದಾಗಲೆಲ್ಲ, "ನಂಗೆ ಮಾತ್ರ ಬರೀ ಅನ್ನ ಬಡಿಸಿದ್ದೀರಲ್ಲಾ.. ಎಣ್ಣೆ ಎಲ್ರೋ, ನಮಗೂ ಮೀನ್ಸಾರು ಬಡುಸ್ರೊ," ಎಂಬ ಗಡುಸು ಜೋಡಿ ಧ್ವನಿಗಳು ಕೇಳಲಾರಂಭಿಸಿದೆಯಂತೆ. ಇದು ಪಕ್ಕಾ ಅನಿಲ್ ಹಾಗೂ ಉದಯ್ ದೆವ್ವಗಳೇ ಎಂಬುದು ಕೆಲ ಮೀನುಗಾರರ ಅಚಲ ನಂಬಿಕೆ. ಈ ಬೆಳವಣಿಗೆಗಳು ಅಲ್ಲಿನ ಮೀನುಗಾರರನ್ನು ದಿಗ್ಬ್ರಾಂತಿ ಗೊಳಿಸಿರೋದು ಸುಳಲ್ಲ!

short by Pawan / read more at Arali Katte

Comments