Skip to main content


“ನಮ್ಮ ಮನೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿದ್ದಾರೆ, ಬಿಜೆಪಿಗರೇ ಓಟು ಕೇಳಲು ಬರಬೇಡಿ”

ಕಥುವಾ ಅತ್ಯಾಚಾರ, ಕೊಲೆ ಪ್ರಕರಣ ಹಾಗು ಉನ್ನಾವೋ ಅತ್ಯಾಚಾರ ಪ್ರಕರಣ ದೇಶಾದ್ಯಂತ ಆಕ್ರೋಶ ಸೃಷ್ಟಿಸಿರುವ ನಡುವೆ ಕೇರಳದ ಮನೆ ಗೋಡೆಗಳಲ್ಲಿ ಅಂಟಿಸಿರುವ ಪೋಸ್ಟರ್ ಗಳು ಇದೀಗ ಭಾರೀ ಸುದ್ದಿಯಾಗಿದೆ.ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಪರ ನಡೆದ ರ್ಯಾಲಿಯಲ್ಲಿ ಬಿಜೆಪಿ ನಾಯಕರು ಮುಂಚೂಣಿಯಲ್ಲಿದ್ದರು. ಆರೋಪಿ ಪರ ವಹಿಸಿದ್ದ ಇಬ್ಬರು ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದರು. ಉನ್ನಾವೋ ಪ್ರಕರಣದಲ್ಲೂ ಕೂಡ ಬಿಜೆಪಿ ಶಾಸಕ ಆರೋಪಿಯಾಗಿದ್ದು, ನಿನ್ನೆ ಸಿಬಿಐ ಆರೋಪಿ ಬಿಜೆಪಿ ಶಾಸಕನನ್ನು ಬಂಧಿಸಿದೆ.ಎರಡೂ ಪ್ರಕರಣಗಳಲ್ಲಿ ಬಿಜೆಪಿ ನಾಯಕರ ಪಾತ್ರ ಇರುವುದರ ಬಗ್ಗೆ ಆರೋಪಗಳ ಕೇಳಿಬಂದ ನಂತರ ಕೇರಳದ ಕೆಲ ಮನೆಗಳಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. “ಈ ಕುಟುಂಬದಲ್ಲಿ ಹೆಣ್ಣುಮಕ್ಕಳಿವೆ, ಓಟು ಕೇಳಿಕೊಂಡು ಮನೆಗೆ ಬರುವ ಬಿಜೆಪಿಗರು ಗೇಟಿನ ಹೊರಗಡೆ ನಿಲ್ಲಿ. #ಬಲತ್ಕಾರಿಜನತಾಪಾರ್ಟಿ” ಎಂದು ಪೋಸ್ಟರ್ ಗಳಲ್ಲಿ ಬರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ಗಳ ಫೋಟೊ ವೈರಲ್ ಆಗಿದೆ.

short by : Nithin / read more at Varthabharathi

Comments