Skip to main content


ಕ್ರೀಡಾಸ್ಫೂರ್ತಿ ಮೆರೆದ ಕ್ಯಾಪ್ಟನ್ ಕೂಲ್ ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಪಂದ್ಯದಲ್ಲಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಹಾಲಿ ಚಾಂಪಿಯನ್ ಮುಂಬಯಿ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ರೋಚಕ ಹಣಾಹಣಿ ನಡೆಯುತ್ತಿದೆ. ಈ ನಡುವೆ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಡಾಸ್ಫೂರ್ತಿ ಮೆರೆಯುವ ಮೂಲಕ ಗಮನ ಸೆಳೆದಿದ್ದಾರೆ. ಮುಂಬಯಿ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಅಲ್ಲದೆ ಕ್ರೀಸಿನಲ್ಲೇ ಬಿದ್ದು ಚಡಪಡಿಸುತ್ತಿದ್ದರು. ಈ ಹಂತದಲ್ಲಿ ಪಾಂಡ್ಯ ಬಳಿ ತೆರಳಿದ ಧೋನಿ ಆರೋಗ್ಯವನ್ನು ವಿಚಾರಿಸಿದರು. ಕೇವಲ ಧೋನಿ ಮಾತ್ರವಲ್ಲದೆ ಚೆನ್ನೈ ತಂಡದ ಆಟಗಾರರಾದ ಹರಭಜನ್ ಸಿಂಗ್ ಹಾಗೂ ಡೇಯ್ನ್ ಬ್ರಾವೋ ಸಹ ಹಾರ್ದಿಕ್‌ಗೆ ಪ್ರೋತ್ಸಾಹ ತುಂಬಿದರು.     

Short by Prajwal / read more at Vijayakarnataka