Skip to main content


ಚೆಲ್ವಿ ಹರಿಪ್ರಿಯಾರಿಂದ ಚುಕ್ಕಿ ರಂಗೋಲಿ, ವೈರಲ್ ಆಯ್ತು ವಿಡಿಯೋ

ಉಗ್ರಂ', 'ರನ್ನ', 'ನೀರ್ ದೋಸೆ', 'ಭರ್ಜರಿ', 'ಕನಕ', 'ಸಂಹಾರ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಹರಿಪ್ರಿಯಾ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿ. 'ಸೂಜಿದಾರ', 'ಕಥಾ ಸಂಗಮ', 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರಗಳ ಶೂಟಿಂಗ್ ನಲ್ಲಿ ತೊಡಗಿರುವ ಹರಿಪ್ರಿಯಾ ಬಿಡುವಿನ ವೇಳೆಯಲ್ಲಿ ರಂಗೋಲಿ ಬಿಡಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಹುಟ್ಟಿದ ಹರಿಪ್ರಿಯಾ, ಅಲ್ಲಿನ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದರು. ಬಳಿಕ ಬೆಂಗಳೂರಿಗೆ ಶಿಫ್ಟ್ ಆದರು. ಮಣ್ಣಿನ ನೆಲದ ಮೇಲೆ ಚೆಂದದ ಚುಕ್ಕಿ ರಂಗೋಲಿ ಬಿಡಿಸಿ, ಅಭಿಮಾನಿಗಳನ್ನು ಬೆರಗು ಗೊಳಿಸಿದ್ದಾರೆ ನಟಿ ಹರಿಪ್ರಿಯಾ.

short by: Nithin /read more at 60secondsnow

Comments