Skip to main content


ನಂ.1 ಯಾರಿ ವಿತ್ ಶಿವಣ್ಣ : ಕಾರ್ಯಕ್ರಮ ದಿಢೀರ್ ಮುಕ್ತಾಯ: ಕಾರಣವೇನು.? 

ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ನಂ.1 ಯಾರಿ ವಿತ್ ಶಿವಣ್ಣ' ಕೂಡ ಒಂದು. ಮಸ್ತ್ ಮನರಂಜನೆ ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಕಾರ್ಯಕ್ರಮ ಮುಕ್ತಾಯದ ಹಂತ ತಲುಪಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅದಾಗಲೇ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಆರು ಸಂಚಿಕೆಗಳು ಪ್ರಸಾರ ಆಗಿದೆ. ಇನ್ನೂ ಏಳು ಸಂಚಿಕೆಗಳು ಪ್ರಸಾರ ಆದರೆ, ಕಾರ್ಯಕ್ರಮ ಮುಗಿದ ಹಾಗೆ. ಅರ್ಥಾತ್ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಕೇವಲ ಹದಿಮೂರು ಸಂಚಿಕೆಗಳಷ್ಟೇ ಪ್ರಸಾರ ಆಗಲಿದೆ. ಅಷ್ಟಕ್ಕೂ, 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಆಯೋಜಕರು ಪ್ಲಾನ್ ಮಾಡಿದ್ದೇ ಹದಿಮೂರು ಸಂಚಿಕೆಗಳು. ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಕಾಲ್ ಶೀಟ್ ಪಡೆದದ್ದು ಕೂಡ ಹದಿಮೂರು ಸಂಚಿಕೆಗಳಿಗಾಗಿ. ಹೀಗಾಗಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾದರೂ, ಅನಿವಾರ್ಯವಾಗಿ ಶೋಗೆ ಶುಭಂ ಹಾಡಬೇಕಾಗಿದೆ.
short by Pawan / read more at Filmibeat