Skip to main content


"ರಂಗಸ್ಥಲಂ" ನಿರ್ದೇಶಕನ ಮುಂದಿನ ಚಿತ್ರದ ನಾಯಕ ಪ್ರಭಾಸ್‌??

ರಂಗಸ್ಥಲಂ ಹಿಟ್‌ ಆಗಿದ್ದೇ ತಡ, ಸುಕುಮಾರ್ ರಾತ್ರೋರಾತ್ರಿ ಸ್ಟಾರ್‌ ಡೈರೆಕ್ಟರ್‌ ಲಿಸ್ಟ್‌ಗೆ ಸೇರಿದ್ದಾರೆ. ಅವರ ಮುಂದಿನ ಚಿತ್ರ ಯಾವುದು ಎನ್ನುವ ಚರ್ಚೆ ಈಗಾಗಲೇ ಸ್ಟಾರ್ಟ್‌ ಆಗಿದೆ. ಆದರೆ, ಸದ್ಯ ಬ್ರೇಕ್‌ ತೆಗೆದುಕೊಂಡಿರುವ ಸುಕುಮಾರ್, ಫ್ಯಾಮಿಲಿ ಜತೆ ಹಾಲಿಡೇಸ್ ಎಂಜಾಯ್ ಮಾಡುತ್ತಿದ್ದಾರೆ. ಟೂರ್‌ನಿಂದ ವಾಪಸ್ಸಾದ ಮೇಲೆ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡುವುದಾಗಿ ಸುಕುಮಾರ್ ಹೇಳಿದ್ದರು. ಆದರೆ, ಮೂಲಗಳ ಪ್ರಕಾರ ಅವರು ಈಗಾಗಲೇ ಪ್ರಭಾಸ್ ಅವರನ್ನು ಭೇಟಿಯಾಗಿದ್ದಾರಂತೆ. ನಿರ್ಮಾಪಕರೊಬ್ಬರು ಸುಕುಮಾರ್ ಹಾಗೂ ಪ್ರಭಾಸ್‌ ಮೀಟಿಂಗ್‌ಗೆ ವ್ಯವಸ್ಥೆ ಮಾಡಿದ್ದರಂತೆ. ಇವರಿಬ್ಬರ ನಡುವೆ 30 ನಿಮಿಷಗಳ ಕಾಲ ಮಾತುಕತೆ ನಡೆದಿದೆಯಂತೆ. ಮೂರು ತಿಂಗಳ ಬಳಿಕ ಹೊಸ ಸ್ಕ್ರಿಪ್ಟ್ ಜತೆ ಬರುವುದಾಗಿ ಸುಕುಮಾರ್ ಹೇಳಿದ್ದಾರಂತೆ. ಪ್ರಭಾಸ್‌ ಕೂಡ ಇವರ ಜತೆ ಚಿತ್ರ ಮಾಡಲು ಮನಸ್ಸು ಮಾಡಿದ್ದಾರಂತೆ.

short by SP/ read more at EenaduIndia

Comments