Skip to main content


ಹೆಂಡ್ತಿಯನ್ನು ಓದಿಸುವ ಸಲುವಾಗಿ ದುಡಿಯಲು ದುಬೈಗೆ ಹೋದ! ಗಂಡ ವಾಪಸ್ ಬಂದಾಗ ಸರ್ಪ್ರೈಸ್..

ರಾಜೇಶ್, ಚೆನ್ನೈ ಸಮೀಪದ ಹಳ್ಳಿಯಲ್ಲಿ ಹುಟ್ಟಿದ ಈತ ಅನಾಥ, ಎಲ್ಲರನ್ನ ಚಿಕ್ಕಂದಿನಲ್ಲೇ ಕಳೆದುಕೊಂಡ. ಹಳ್ಳಿಯವರ ಸಹಾಯದಿಂದ ಬೆಳೆದ ರಾಜೇಶ್ ಮೆಕ್ಯಾನಿಕ್ ಶೆಡ್ ಒಂದನ್ನು ತೆರೆದು ಕೆಲಸ ಪ್ರಾರಂಭಿಸಿದ. ಇದೇ ಸಂದರ್ಭದಲ್ಲಿ ಮದುವೆಯನ್ನೂ ಮಾಡಿಕೊಂಡ. ಹೆಂಡತಿಗೆ ಓದು ಅಂದರೆ ತುಂಬಾ ಇಷ್ಟ ಎಂದು ತಿಳಿದ ರಾಜೇಶ್ ಮದುವೆಯಾದ ಮೇಲು ಆಕೆಯನ್ನ ಓದಿಸಿದ, ಹಾಗೆ ಹೆಂಡತಿ ಡಿಗ್ರಿ ಪೂರ್ಣ ಮಾಡಿದಳು. ಆಕೆ ಮಾಸ್ಟರ್ ಡಿಗ್ರಿ ಓದಲು ಆಸಕ್ತಿ ತೋರಿದ ಕಾರಣ ಹಳ್ಳಿಯಲ್ಲಿದ್ದ ಮೆಕಾನಿಕ್ ಶೆಡ್ ಮಾರಿ ಚನೈ ನಲ್ಲಿ ಮನೆ ಮಾಡಿದ. ಹೆಂಡತಿಯ ಆಸೆಗೆ ಮನಸೋತ ರಾಜೇಶ್ ಇಲ್ಲಿ ಕೆಲಸ ಮಾಡಿದರೆ ಅಮೇರಿಕಾದಲ್ಲಿ ಓದಿಸುವಷ್ಟು ಹಣ ಬರುವುದಿಲ್ಲ, ನನ್ನ ಸ್ನೇಹಿತ ದುಬೈ ನಲ್ಲಿ ಇದ್ದಾನೆ, ನಾನು ಅಲ್ಲಿಗೆ ಹೋಗಿ ಕೆಲಸ ಮಾಡುತ್ತೇನೆ ಎಂದು ಹೇಳಿ ಹೆಂಡತಿಯ ಜೊತೆ ಆಕೆಯ ತಾಯಿಯನ್ನ ಬಿಟ್ಟು ರಾಜೇಶ್ ದುಬೈ ಗೆ ಹೊರಟುಹೋದ. ಒಂದುವರೆ ವರ್ಷ ದುಬೈ ನಲ್ಲಿ ಕೆಲಸ ಮಾಡಿದ ರಾಜೇಶ್ ಹಣ ತೆಗೆದುಕೊಂಡು ವಾರದಲ್ಲಿ ಬರುತ್ತೇನೆ ಎಂದು ಹೆಂಡತಿಗೆ ಹೇಳಿದ. ಇದರಿಂದ ಸಂತೋಷಗೊಂಡ ಹೆಂಡತಿ ಮೊದಲು ಹಣ ಕಳುಹಿಸಿ ನಾನು ವೀಸಾ ಗೆ ಅಪ್ಲೈ ಮಾಡುತ್ತೇನೆ ಎಂದಳು, ಆಕೆ ಹೇಳಿದಂತೆ ಎಲ್ಲ ಹಣವನ್ನ ಹೆಂಡತಿಯ ಅಕೌಂಟ್ ಗೆ ಹಾಕಿದ. ಒಂದು ವಾರದ ನಂತರ ವಾಪಾಸ್ ಚೆನ್ನೈ ಗೆ ಬಂದ ರಾಜೇಶ್ ಮನೆಯ ಬಳಿ ಹೋಗಿ ನೋಡಿದರೆ ಹೆಂಡತಿ ಇಲ್ಲ, ಫೋನ್ ಮಾಡಿದರೆ ಸ್ವಿಚ್ ಆಫ್, ಬಾಗಿಲು ಒಡೆದು ಒಳಗೆ ನೋಡಿದರೆ ಎಲ್ಲಾ ಖಾಲಿ. ಇದರಿಂದ ಶಾಕ್ ಆದ ರಾಜೇಶ್ ತನ್ನ ಊರಿಗೆ ಹೋದ. ರಾಜೇಶ್ ನನ್ನ ನೋಡಿದ ಊರಿನ ಜನ ಶಾಕ್ ಆಗಿ, ನೀನಿನ್ನೂ ಬದುಕಿದ್ದೀಯಾ, ನೀನು ದುಬೈ ನಲ್ಲಿ ಸತ್ತು ಹೋಗಿ, ನಿನ್ನ ಶವ ಕೂಡ ಸಿಗಲಿಲ್ಲ ಎಂದು ನಿನ್ನ ಹೆಂಡತಿ ಹೇಳಿದಳು ಎಂದು ಪ್ರಶ್ನಿಸಿದರು ಊರಿನ ಜನ. ಇದರಿಂದ ಶಾಕ್ ಗೆ ಗುರಿಯಾದ ರಾಜೇಶ್ ಹುಚ್ಚನಾಗಿ ಈಗ ಬೀದಿಯಲ್ಲಿ ತಿರುಗುತ್ತಿದ್ದಾನೆ.   

short by Pawan / read more at Karnataka Today


Comments