Skip to main content


ಮಾವನ ಜೊತೆ ಮದ್ಯ ಕುಡಿದು ಹುಕ್ಕಾ ಎಂಜಾಯ್ ಮಾಡಿದ ನಟಿ

ಯೇ ಹೇ ಮೊಹಬ್ಬತೇ ಧಾರಾವಾಹಿ ನಟಿ ಅನಿತಾ ಹಸನಂದಾನಿ ಏಪ್ರಿಲ್ 14ರಂದು 37ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಅನಿತಾ ತನ್ನ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿಕೊಂಡಿದ್ದಾಳೆ. ಹುಟ್ಟುಹಬ್ಬದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ಒಂದು ಫೋಟೋದಲ್ಲಿ ಅನಿತಾ ಹುಕ್ಕಾ ಸೇದುತ್ತಿದ್ದರೆ ಇನ್ನೊಂದರಲ್ಲಿ ಮಾವನ ಜೊತೆ ಮದ್ಯ ಸೇವನೆ ಮಾಡ್ತಿದ್ದಾಳೆ. ಅನಿತಾ ಮಾವ ನಿವೃತ್ತ ಸೇನಾಧಿಕಾರಿಯಾಗಿದ್ದು ಸೊಸೆ ಜೊತೆ ಆಪ್ತರಾಗಿದ್ದಾರೆ. ಅನಿತಾ ಪತಿ ರೋಹಿತ್ ಬ್ಯುಸಿನೆಸ್ ಮ್ಯಾನ್ ಆಗಿದ್ದು 2013ರಲ್ಲಿ ಅನಿತಾ ರೋಹಿತ್ ಮದುವೆ ನಡೆದಿತ್ತು.ಜಿಮ್ ನಲ್ಲಿ ಮೊದಲು ಇಬ್ಬರ ಭೇಟಿಯಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅನಿತಾ ಧಾರಾವಾಹಿಯಲ್ಲೊಂದೇ ಅಲ್ಲ ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ನಟಿಸಿದ್ದಾಳೆ.

short by: Nithin / read more at Kannadadunia

Comments