Skip to main content


ಮುಗ್ಧ ಕಂದಮ್ಮನ ಮೇಲೆ ಗ್ಯಾಂಗ್ ರೇಪ್: ಬಾಲಿವುಡ್ ತೀವ್ರ ಆಕ್ರೋಶ

ಜಮ್ಮು ಕಾಶ್ಮೀರದಲ್ಲಿ ಆಸಿಫಾ ಎಂಬ ಬಾಲಕಿಯನ್ನು ಆರು ಮಂದಿ ವ್ಯಕ್ತಿಗಳು ಅತ್ಯಂತ ಪೈಶಾಚಿಕವಾಗಿ ಡ್ರಗ್ಸ್ ನೀಡಿ ಕೆಲವು ದಿನಗಳ ಕಾಲ ಲೈಂಗಿಕವಾಗಿ ಕಿರುಕುಳ ನೀಡಿ, ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿದ್ದಾರೆ. ಆಸಿಫಾ ಒಬ್ಬ ಗಿರಿಜನ ಮುಸ್ಲಿಂ ಬುಡಕಟ್ಟಿಗೆ ಸೇರಿದ ಮಗು. ಹಿಂದೂಗಳು ಅಧಿಕವಾಗಿರುವ ಕಥುವಾ ಪ್ರದೇಶದಲ್ಲಿ ಕೆಲವು ಆಗಂತುಕರು ಬಾಲಕಿಯನ್ನು ಕಿಡ್ನಾಪ್ ಮಾಡಿ ದೇವಿಸ್ಥಾನ್ ಎಂಬ ದೇವಾಲಯದಲ್ಲಿಟ್ಟು ಅತ್ಯಾಚಾರವೆಸಗಿದ್ದಾರೆ. ಈ ಅಮಾನುಷ ಘಟನೆ ಬಗ್ಗೆ ಬಾಲಿವುಡ್ ತಾರೆಗಳು ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡರಾದ ಕಪಿಲ್ ಸಿಬಾಲ್ ಸಹ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. 
     
short by Pawan / read more at Balkani News