Skip to main content


ಮೂಡುಬಿದಿರೆಯಲ್ಲಿ ಉಚಿತ ಸಾಮೂಹಿಕ ವಿವಾಹ

ಇಲ್ಲಿನ ಭಗತ್ಸೇನೆಯ ನೇತೃತ್ವದಲ್ಲಿ ಸುರೇಶ್ ಶೆಟ್ಟಿ , ಹರಿಮೀನಾಕ್ಷಿ, ದೋಟ ಮಿಜಾರು ಇವರ ಸಂಪೂರ್ಣ ಸಹಕಾರದೊಂದಿಗೆ ರವಿವಾರ ಬೆಳಗ್ಗೆ 11.01ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಆಲಂಗಾರಿನ ಈಶ್ವರ ಭಟ್ ಮತ್ತು ಬಳಗದವರ ಪೌರೋಹಿತ್ಯದಲ್ಲಿ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಸ್ವರಾಜ್ಯ ಮೈದಾನದ ಆದಿಶಕ್ತಿ ದೇವಸ್ಥಾನದ ಬಳಿ ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ರಂಗಗಳ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಜರಗಿತು.ವಧುವಿಗೆ ಒಂದೂವರೆ ಪವನಿನ ಚಿನ್ನದ ಕರಿಮಣಿ ತಾಳಿ, ಸೀರೆ, ವರನಿಗೆ ಧೋತಿ, ಶರ್ಟ್, ಶಾಲು, ಪೇಟಾ ನೀಡಲಾಗಿತ್ತು.

short by: Nithin /read more at Udayavani

Comments