Skip to main content


ಮೈಸೂರಿನಲ್ಲಿ ನಟಿ ಪಾರುಲ್ ಯಾದವ್ ವಿವಾಹ !

ಈ ಸುದ್ದಿ ಕೇಳಿ ಶಾಕ್ ಆಗಬೇಡಿ ಪಾರೂಲ್ ಮದುವೆಯಾಗುತ್ತಿರುವುದು ರಿಯಲ್ ಲೈಫ್‍ನಲ್ಲಿ ಅಲ್ಲ, ರೀಲ್ ಲೈಫ್‍ನಲ್ಲಿ. `ಬಟರ್‌ ಫ್ಲೈ' ಎಂಬ ಚಿತ್ರದಲ್ಲಿ ಪಾರುಲ್ ನಟಿಸುತ್ತಿದ್ದು, ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗಿದೆ. ಇದರಲ್ಲಿ ಮದುವೆ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದ್ದು, ಮದರಂಗಿ, ಮನೆಯಲ್ಲಿನ ಮದುವೆ ಸಂಭ್ರಮ ಸೇರಿದಂತೆ ಸಾಕಷ್ಟು ದೃಶ್ಯಗಳನ್ನು ಚಿತ್ರದ ನಿರ್ದೇಶಕ ರಮೇಶ್ ಅರವಿಂದ್ ಸೆರೆಹಿಡಿಯುತ್ತಿದ್ದಾರೆ. ಬೆಂಗಳೂರು, ಗೋಕರ್ಣ, ಪ್ಯಾರಿಸ್, ಯುಎಸ್‌ ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು ಇದೀಗ ಕೊನೆಯ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.    

short by Pawan / read more at 60secondsnow

Comments