Skip to main content


ಲೋಕಾಯುಕ್ತವನ್ನೇ ನಾಶಪಡಿಸಿದ ಸಿದ್ದರಾಮಯ್ಯ ಈಗ ಬಲಪಡಿಸ್ತೇನೆ ಅಂತಾರೆ: ಎಚ್‌ಡಿಕೆ ಲೇವಡಿ

ಲೋಕಾಯುಕ್ತವನ್ನು ಬಲಹೀನಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಚುನಾವಣೆ ನೆಪದಲ್ಲಿ ಲೋಕಾಯುಕ್ತವನ್ನು ಬಲಪಡಿಸುವ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು. ನಗರದಲ್ಲಿ ಶನಿವಾರ ರೋಡ್ ಶೋ ಮೂಲಕ ಜೆಡಿಎಸ್ ಅಭ್ಯರ್ಥಿ, ಶಾಸಕ ಎಂ.ಶ್ರೀನಿವಾಸ್ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಅವರು, ಲೋಕಾಯುಕ್ತಕ್ಕಿದ್ದ ಎಲ್ಲ ಶಕ್ತಿ, ಅಧಿಕಾರವನ್ನು ಕಸಿದುಕೊಂಡ ಸಿದ್ದರಾಮಯ್ಯ ಅವರು ಒಂದು ರೀತಿಯಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನೇ ನಾಶ ಮಾಡಿದ್ದಾರೆ. ಆದರೀಗ ಮತ್ತೆ ನನಗೆ ಅಧಿಕಾರ ಕೊಡಿ, ಲೋಕಾಯುಕ್ತವನ್ನು ಬಲಪಡಿಸುತ್ತಿದ್ದೇನೆ ಎನ್ನುತ್ತಾರೆ. ಇದು ನಂಬುವ ಮಾತೆ? ಎಂದು ಪ್ರಶ್ನಿಸಿದರು.          

short by NP / more at Vijaya KarnatakaComments