Skip to main content


ಸೋನಿಯಾ ಗಾಂಧಿ ಪಾತ್ರಕ್ಕಾಗಿ ಜರ್ಮನಿಯಿಂದ ಬಂದ ನಟಿ.!

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತು ಹೊಸ ಸಿನಿಮಾ ಮೂಡಿ ಬರುತ್ತಿದ್ದು, ಈ ಚಿತ್ರದ ಹೊಸ ಪೋಸ್ಟರ್ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಚಿತ್ರಕ್ಕೆ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಎಂದು ಹೆಸರಿಟ್ಟಿದ್ದು, ದೇಶದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಈ ಚಿತ್ರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರದಲ್ಲಿ ಬಾಲಿವುಡ್‌ ನಟ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಸೋನಿಯಾ ಗಾಂಧಿ ಪಾತ್ರಕ್ಕೆ ಜರ್ಮನ್ ಮೂಲದ ನಟಿಯನ್ನು ಕರೆತರಲಾಗಿದ್ದು, ನಟಿ ಸುಝೇನ್ ಬರ್ನೆಟ್, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಾತ್ರ ನಿಭಾಯಿಸಲಿದ್ದಾರೆ. ನಿನ್ನೆಯಿಂದ ಚಿತ್ರೀಕರಣ ಆರಂಭವಾಗಿದ್ದು, ಲಂಡನ್ ನಲ್ಲಿ ಶೂಟಿಂಗ್ ನಡೆಯುತ್ತಿದೆ.          

short by Pawan / read more at Filmibeat

Comments