Skip to main content


ರಾಘಣ್ಣ ಒಪ್ಪಿಕೊಂಡಿರುವ ಮೂರು ಹೊಸ ಸಿನಿಮಾ ಯಾವುದು.?

ಸುಮಾರು 14 ವರ್ಷದ ನಂತರ ನಟ ರಾಘವೇಂದ್ರ ರಾಜ್‍ಕುಮಾರ್ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ದವಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ಅಭಿನಯಿಸುತ್ತಿರುವ 'ಚೀಲಂ' ಚಿತ್ರದಲ್ಲಿ ನೆಗಿಟೀವ್ ಪಾತ್ರದಲ್ಲಿ ರಾಘಣ್ಣ ಬಣ್ಣ ಹಚ್ಚಲಿದ್ದಾರಂತೆ. ರಾಘಣ್ಣ ಕೇವಲ ಒಂದು ಸಿನಿಮಾದಲ್ಲಿ ಮಾತ್ರವಲ್ಲ ಮತ್ತೆರೆಡು ಚಿತ್ರಗಳಲ್ಲಿ ಅಭಿನಯಿಸಲಿದ್ದಾರಂತೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿಖಿಲ್ ಮಂಜು ನಿರ್ದೇಶನದ 'ಅಮ್ಮನ ಮನೆ' ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸುತ್ತಿದ್ದಾರೆ. ತಂದೆ ತಾಯಿಯ ಪ್ರೀತಿಯ ಬಗ್ಗೆಯೇ ಹೇಳುವ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಲಿದ್ದಾರಂತೆ. ಇನ್ನು ಇದರ ಜೊತೆಗೆ ಪ್ರತಾಪ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹಾರರ್ ಸಿನಿಮಾವನ್ನ ಒಪ್ಪಿಕೊಂಡಿದ್ದಾರಂತೆ. ಈ ಮಧ್ಯೆ ಎಸ್ ಕೆ ಭಗವಾನ್ ನಿರ್ದೇಶನದ 'ಆಡುವ ಗೊಂಬೆ' ಚಿತ್ರದ ಹಾಡೊಂದಕ್ಕೆ ರಾಘಣ್ಣ ಧ್ವನಿಯಾಗಿದ್ದು, ಈಗಾಗಲೇ ಹಾಡು ಸಿದ್ದವಾಗಿದೆ. ಬಿಡುಗಡೆ ಮಾತ್ರ ಬಾಕಿಯಿದೆ.     

short by Pawan / more at Filmibeat

Comments