Skip to main content


ಕುಸ್ತಿ: ಎದುರಾಳಿಯ ಹೆಡೆಮುರಿಕಟ್ಟಿದ ಬಜರಂಗ್‌ ಪುನಿಯಾಗೆ ಚಿನ್ನ

ಎದುರಾಳಿಯ ಹೆಡೆಮುರಿಕಟ್ಟಿದ ಭಾರತ ಪೈಲ್ವಾನ ಬಜರಂಗ್‌ ಪುನಿಯಾ ಅವರು ಕಾಮನ್‌ ವೆಲ್ತ್‌ ಕ್ರೀಡಾಕೂಟದ ಕುಸ್ತಿ ಅಖಾಡದಲ್ಲಿ ಚಿನ್ನದ ನಗೆ ಬೀರಿದರು. ಅತ್ಯುತ್ತಮ ಪಟ್ಟುಗಳನ್ನು ಹಾಕಿ ಎದುರಾಳಿಯನ್ನು ಮಣಿಸಿದ ಬಜರಂಗ್‌ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದರು. 65 ಕೆ.ಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಕಣಕ್ಕೆ ಇಳಿದ ಹರಿಯಾಣದ 24ರ ಹರೆಯದ ಕುಸ್ತಿಪಟು ಬಜರಂಗ್‌ ಪುನಿಯಾ ವೇಲ್ಸ್‌ ಕೇನ್‌ ಚಾರಿಗ್‌ ಅವರನ್ನು 10–0 ಅಂಕಗಳೊಂದಿಗೆ ಮಣಿಸಿದರು. ಕ್ರೀಟಾಕೂಟದ ಎಂಟನೇ ದಿನದ ಪಂದ್ಯದಲ್ಲಿ ಗಳಿಸಿದ ಈ ಚಿನ್ನದೊಂದಿಗೆ ಭಾರತ 16 ಚಿನ್ನದ ಪದಕಗಳನ್ನು ಗಳಿಸಿದೆ.     
         
short by Prajwal / read more at Prajavani