Skip to main content


ಕಿಚ್ಚ ಸುದೀಪ್ ಬ್ಯಾಟಿಂಗ್, ಸೆಂಚುರಿ ಸ್ಟಾರ್ ಶಿವಣ್ಣ ಬೌಲಿಂಗ್

ಕನ್ನಡ ಚಲನಚಿತ್ರ ಕಪ್ ಟೂರ್ನಮೆಂಟ್ ಆರಂಭವಾಗುತ್ತಿದ್ದು, ಇದೇ ಏಪ್ರಿಲ್ 7 ಮತ್ತು 8 ರಂದು ಸ್ಯಾಂಡಲ್ ವುಡ್ ತಾರೆಯರು ಮೈದಾನಕ್ಕೀಳಿಯಲಿದ್ದಾರೆ. ಹೀಗಾಗಿ, ಕಳೆದ ಒಂದು ವಾರದಿಂದ ಸತತವಾಗಿ ಅಭ್ಯಾಸ ಮಾಡ್ತಿದ್ದಾರೆ. ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ದಿಗಂತ್ ಸೇರಿದಂತೆ ಹಲವು ನಟರು ಕೆಸಿಸಿ ಆಡಲಿದ್ದು, ಎಲ್ಲರೂ ಪ್ರಾಕ್ಟೀಸ್ ಮಾಡ್ತಿದ್ದಾರೆ. ಇಂದಿನ ಪ್ರಾಕ್ಟೀಸ್ ನಲ್ಲಿ ವಿಶೇಷವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಿಚ್ಚ ಸುದೀಪ್ ಗಮನ ಸೆಳೆದರು. ನೆಟ್ ಪ್ರಾಕ್ಟೀಸ್ ಮಾಡಿದ ಇಬ್ಬರು ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿ ಖುಷಿ ಪಟ್ಟರು.

short by Nithin / read more at 60secondnow 

Comments