Skip to main content


ಮತ್ತೆ ಒಂದಾದ ದೀಪಿಕಾ-ರಣವೀರ್

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ರಾಮ್ೕಲಾ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪ್ರಥಮ ಬಾರಿಗೆ ಒಟ್ಟಾಗಿ ನಟಿಸಿದ್ದರು. ಈವರೆಗೆ ಈ ಜೋಡಿ ಒಟ್ಟಿಗೆ ಮೂರು ಚಿತ್ರಗಳಲ್ಲಿ ನಟಿಸಿದೆ. ಮೂರೂ ಸೂಪರ್ ಹಿಟ್ ಆಗಿವೆ. ಈಗ ಇಬ್ಬರೂ ತೆರೆಮೇಲೆ ಮತ್ತೆ ಒಂದಾಗಲು ಸಿದ್ಧರಾಗಿದ್ದಾರಂತೆ. ಆದಿತ್ಯ ಚೋಪ್ರ ನಿರ್ವಣದ ಹೊಸ ಸಿನಿಮಾದಲ್ಲಿ ಅವರಿಬ್ಬರು ಒಟ್ಟಿಗೆ ನಟಿಸುವುದು ಖಚಿತವಂತೆ. ರಣವೀರ್ ಮತ್ತು ದೀಪಿಕಾ ಜತೆ ಆದಿತ್ಯ ಮಾತುಕತೆ ನಡೆಸಿ ಎಲ್ಲವನ್ನೂ ‘ಓಕೆ’ ಮಾಡಿಕೊಂಡಿದ್ದಾರಂತೆ. ‘ರಾಮ್ೕಲಾ’ ಹಿಟ್ ಆದ ನಂತರ ದೀಪಿಕಾ-ರಣವೀರ್ ‘ಬಾಜಿರಾವ್ ಮಸ್ತಾನಿ’ ಮತ್ತು ‘ಪದ್ಮಾವತ್’ನಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು.       

short by Pawan / read more at Vijayavani

Comments