Skip to main content


ಭಾರೀ ಮಳೆಗೆ ಕುಸಿದ ಆಗ್ರಾ ತಾಜ್ ಮಹಲ್ ಪ್ರವೇಶ ದ್ವಾರ ಸ್ತಂಭ

ನಿನ್ನೆ ಬುಧವಾರ ರಾತ್ರಿ ಸುರಿದ ಭಾರೀ ಮಳೆ ಮತ್ತು ಬೀಸಿದ ಪ್ರಬಲ ಗಾಳಿಗೆ ಇಲ್ಲಿನ ವಿಶ್ವ ಪ್ರಸಿದ್ಧ ತಾಜ್ ಮಹಲ್ ಐತಿಹಾಸಿಕ ಸ್ಮಾಕರದ ಪ್ರವೇಶ ದ್ವಾರದ ಸ್ತಂಭವೊಂದು ಉರುಳಿ ಬಿದ್ದಿರುವ ಘಟನೆ ವರದಿಯಾಗಿದೆ.

ತಾಜ್ ಮಹಲ್ ಪ್ರವೇಶಿಸುವ ದಕ್ಷಿಣ ಭಾಗದಲ್ಲಿರುವ ಪ್ರವೇಶ ದ್ವಾರದ ಸ್ತಂಭ ಉರುಳಿ ಬಿದ್ದಾಗ ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ವರದಿಗಳು ತಿಳಿಸಿವೆ.

ಈಚೆಗಷ್ಟೇ ಅಧಿಕಾರಿಗಳು ತಾಜ್ ಮಹಲ್ ಪ್ರವೇಶಿಸುವ ಅವಧಿಯನ್ನು ಮೂರು ಗಂಟೆಗೆ ಇಳಿಸುವ ಕ್ರಮ ಕೈಗೊಂಡಿದ್ದರು. ಈ ಐತಿಹಾಸಿಕ ಸ್ಮಾರಕ ಸಾಕಷ್ಟು ಹಳತಾಗಿರುವುದರಿಂದ ಪ್ರವಾಸಿಗರ ಒತ್ತಡಕ್ಕೆ ಗುರಿಯಾಗುವುದನ್ನು ಕಡಿಮೆ ಮಾಡಲು ಅಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದರು.   

short by Pawan / read more at Udayavani

Comments