Skip to main content


ಶೀಘ್ರದಲ್ಲಿ ಬಿಗ್ ಬಾಸ್ ನ ಮತ್ತೊಂದು ಸೀಸನ್ ಆರಂಭ, ನೀವೂ ಭಾಗವಹಿಸಬಹುದು

ಹಿಂದಿಯ ಬಿಗ್ ಬಾಸ್ ಆವೃತ್ತಿ 11 ಮುಗಿದು ಕೆಲವೇ ತಿಂಗಳಾಗಿದೆ. ಈಗ ಬಿಗ್ ಬಾಸ್ 12ನೇ ಆವೃತ್ತಿಗೆ ತಯಾರಿ ಆರಂಭವಾಗಿದೆ. ಕಲರ್ಸ್ ಚಾನೆಲ್ ಅಧಿಕೃತ ವೆಬ್ ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಕಾರ್ಯಕ್ರಮದಲ್ಲಿ ಜನಸಾಮಾನ್ಯನಿಗೂ ಭಾಗವಹಿಸುವ ಅವಕಾಶವಿದೆ. ಬಿಗ್ ಬಾಸ್ 12 ಶೀಘ್ರದಲ್ಲಿಯೇ ಬರಲಿದೆ. ರಿಯಾಲಿಟಿ ಶೋ ಸಂಗಾತಿಗಳ ಹುಡುಕಾಟದಲ್ಲಿದೆ ಎಂದು ಕಲರ್ಸ್ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ. ಈ ಬಾರಿ ಬಿಗ್ ಬಾಸ್ ಜೋಡಿಗಳ ಶೋ ಎನ್ನಲಾಗುತ್ತಿದೆ. ಈವರೆಗೆ ಶೋವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದಾರೆ. ಮುಂದಿನ ಸೀಜನ್ ನಿರೂಪಣೆ ಕೂಡ ಸಲ್ಮಾನ್ ಮಾಡಲಿದ್ದಾರೆ.   

short by Pawan / read more at 60secondsnow

Comments