Skip to main content


ಶಿವಣ್ಣ ಮತ್ತು ದರ್ಶನ್​ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್​!

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಮತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಇನ್ನು ಒಟ್ಟಿಗೆ ತೆರೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ. ಅಂದಹಾಗೇ ಈ ಸುಳಿವು ಬಿಟ್ಟುಕೊಟ್ಟಿದ್ದು ಸ್ವತಃ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​. ಮಫ್ತಿ ಚಿತ್ರದ ನಿರ್ದೇಶಕ ನರ್ತನ್​ ಹಾಗೂ ರೋರಿಂಗ್​ ಸ್ಟಾರ್​ ಮುರಳಿ ಭಾಗವಹಿಸಿದ್ದರು. ಈವೇಳೆ ನರ್ತನ್​ ಅವರ ಮುಂದಿನ ಚಿತ್ರದ ಬಗ್ಗೆ ಶಿವಣ್ಣ ಮಾತನಾಡುತ್ತಿದ್ದರು. ಅಂದಹಾಗೇ ನನ್ನ ಮಫ್ತಿ ಚಿತ್ರದಲ್ಲಿ ನನ್ನ ಹಾಗೂ ಶ್ರೀ ಮುರಳಿ ಕಾಂಬಿನೇಷನ್​ನಲ್ಲಿ ಸಿನಿಮಾ ಮಾಡಿದ್ದೀರಿ , ಈಗ ಮಫ್ತಿ-2 ಸಿನಿಮಾ ಮಾಡುತ್ತೀರಾ ಎಂದು ಶಿವಣ್ಣ ನಿರ್ದೇಶಕ ನರ್ತನ್​ರನ್ನು ಪ್ರಶ್ನಿಸಿದ್ದರು. ಆಗ ನರ್ತನ್​ ನಗುತ್ತಾ ಮಫ್ತಿ -2 ಭೈರತಿ ರಣಗಲ್​ ಎಂದು ಟೈಟಲ್​ ಇಡಲು ನರ್ತನ್​ ಯೋಚಿಸುತ್ತಿದ್ದೇನೆ ಎಂದು ಉತ್ತರಿಸಿದ್ದರು. ಹಾಗೇ ಶಿವಣ್ಣ ಮತ್ತು ದರ್ಶನ್​ ಎಂಬ ಹೆಸರು ಸಿನಿಮಾದಲ್ಲಿದೆ ಇದೆ ಏನಂತೀರಾ ಇದಕ್ಕೆ ಎಂದಾಗ ಶಿವಣ್ಣ ಮಾಡಿ ಯಾರು ಬೇಡ ಅಂತಾರೆ? ನನಗೆ ಎಲ್ಲರ ಜೊತೆ ನಟಿಸುವ ಆಸೆ ಇದೆ ಎಂಬ ಸುಳಿವನ್ನು ಕೊಟ್ಟರು. ಒಟ್ಟಾರೆ ಕನ್ನಡದ ಮೈಲಾರಿ ಶಿವಣ್ಣ ಮತ್ತು ಚಾಲೆಂಜಿಗ್​ ಸ್ಟಾರ್​ ದರ್ಶನ್​ ಇಬ್ಬರು ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು ಸದ್ಯದಲ್ಲೇ ಹೊಸ ಚಿತ್ರ ಬರುವ ನಿರೀಕ್ಷೆಯನ್ನು ಮೂಡಿಸಿದ್ದಾರೆ.   

short by Pawan / more at Bp9news

 

Comments