Skip to main content


ಶೀಘ್ರ ಭಾರತ-ಕಾಠ್ಮಂಡು ರೈಲ್ವೇ ಲೈನ್‌ ನಿರ್ಮಾಣ: ಪ್ರಧಾನಿ ಮೋದಿ

ಭಾರತವನ್ನು ಕಾಠ್ಮಂಡು ಜತೆಗೆ ಜೋಡಿಸುವ ಹೊಸ ರೈಲ್ವೆ ಲೈನ್‌ ನಿರ್ಮಾಣಕ್ಕೆ ಭಾರತ- ನೇಪಾಲ ಒಪ್ಪಿಕೊಂಡಿದ್ದು  ಶೀಘ್ರವೇ ಈ ಯೋಜನೆ ಅನುಷ್ಠಾನವಾಗಲಿದೆ  ಪ್ರಧಾನಿ ನರೇಂದ್ರ ಮೋದಿ ಅವರಿಂದು ಶನಿವಾರ ಹೇಳಿದ್ದಾರೆ. "ನೇಪಾಲದೊಂದಿಗೆ ನಾವು ರೈಲು ಮತ್ತು ಜಲಮಾರ್ಗಗಳನ್ನು ಸುಧಾರಿಸುವ ಉದ್ದೇಶ ಹೊಂದಿದ್ದೇವೆ. ಭದ್ರತೆಯ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ನಡುವಿನ ಬಲವಾದ ಸಂಬಂಧಗಳಿವೆ. ಅಂತೆಯೇ ನಮ್ಮ ನಡುವಿನ ಮುಕ್ತ ಗಡಿಗಳ ದುರ್ಬಳಕೆಯನ್ನು ನಿಲ್ಲಿಸುವುದಕ್ಕೆ ನಾವು ಬದ್ಧರಾಗಿದ್ದೇವೆ' ಎಂದು ಪ್ರಧಾನಿ ಮೋದಿ ಹೇಳಿದರು.      
  
short by NP / read more at Udayavani