Skip to main content


ಅಣ್ವಸ್ತ್ರ ನಾಶಕ್ಕೆ ಕಿಮ್‌ ಸಿದ್ಧ

ದಕ್ಷಿಣ ಕೊರಿಯಾ ಅಧ್ಯಕ್ಷರ ಭೇಟಿ ವೇಳೆ ನೀಡಿದ ವಾಗ್ಧಾನದಂತೆ ನಡೆದುಕೊಳ್ಳಲು ಉತ್ತರ ಕೊರಿಯಾ ನಿರ್ಧರಿಸಿದೆ. ಅದರಂತೆ, ಮೇ ತಿಂಗಳಲ್ಲೇ ತನ್ನ ಅಣ್ವಸ್ತ್ರ ಪರೀಕ್ಷಾ ಕೇಂದ್ರಗಳನ್ನು ಮುಚ್ಚಲು ಉ.ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಮುಂದಾಗಿದ್ದಾರೆ. ಅಮೆರಿಕದ ಶಸ್ತ್ರಾಸ್ತ್ರ ತಜ್ಞರನ್ನು ತನ್ನ ದೇಶಕ್ಕೆ ಕರೆಸಿಕೊಂಡು, ಪರೀಕ್ಷಾ ಕೇಂದ್ರಗಳ ಮುಚ್ಚುವಿಕೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕಿಮ್‌ ತಿಳಿಸಿರುವುದಾಗಿ ದ.ಕೊರಿಯಾ ಅಧ್ಯಕ್ಷರ ವಕ್ತಾರ ಯೂನ್‌ ಯಂಗ್‌ ಚಾನ್‌ ಹೇಳಿದ್ದಾರೆ. ಇತ್ತೀಚೆಗಿನ ಮಾತುಕತೆ ವೇಳೆ ಎರಡೂ ರಾಷ್ಟ್ರಗಳು ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಒಪ್ಪಂದಕ್ಕೆ ಬಂದಿದ್ದವು.

Short by Sp / more at NewsPoint

Comments