Skip to main content


ಆಡಿಸಿ ನೋಡು, ಬೀಳಿಸಿ ನೋಡು ಅಳಿಯದು ನಿಮ್ಮ ನೆನಪು..

ಚಂದನವನದ ಮೇರುನಟ , ನಟಸಾರ್ವಭೌಮ ಡಾ.ರಾಜ್ ಕುಮಾರ್ ಸ್ವರ್ಗಸ್ಥರಾಗಿ ಇಂದಿಗೆ   ೧೨ ವರ್ಷಗಳಾಗಿವೆ. ವರನಟನ ಪುಣ್ಯಸ್ಮರಣೆಯ ದಿನವಾದ ಇಂದು ಬೆಂಗಳೂರಿನಲ್ಲಿರುವ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಸಹಸ್ರಾರು  ಸಂಖ್ಯೆಯಲ್ಲಿ ರಾಜ್ ಅಭಿಮಾನಿಗಳ ದಂಡು ಸೇರಲಿದೆ.

206 ಚಿತ್ರದಲ್ಲಿ  ನಟಿಸಿ, ಸ್ವರ ಮಾಧುರ್ಯತೆಯಿಂದ ರಂಜಿಸಿದ ರಾಜ್ ಚಿರ ಸ್ಮರಣೀಯರು. ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರವಾದದ್ದು. ಇಂತಹ ಕಲಾವ್ರಕ್ಷವನ್ನು ಸ್ಮರಿಸಲು ಕರ್ನಾಟಕದ ಮೂಲೆ ಮೂಲೆಗಳಿಂದ ಅಭಿಮಾನಿಗಳು ರಾಜ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ.

ಇನ್ನೂ ರಾಜ್ ಕುಟುಂಬ ಸದಸ್ಯರು ಪ್ರತಿ ವರ್ಷದಂತೆ ಈ ವರ್ಷವೂ ಪೂಜೆ ಸಲ್ಲಿಸಲಿದ್ದಾರೆ. ಆಗಮಿಸಿದ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕೂಡ ನೆರೆವೆರಲಿಕ್ಕಿದೆ. ಇನ್ನೂ ಹಲವಾರು ಕನ್ನಡ ಚಿತ್ರರಂಗದ ನಾಯಕ ನಾಯಕಿಯರು ಆಗಮಿಸಿ ರಾಜ್ ಸ್ಮಾರಕಕ್ಕೆ  ನಮಿಸಲ್ಲಿದ್ದಾರೆ. ಅಣ್ಣಾವ್ರ ನೆನಪು ಎಂದಿಗೂ ಅವಿಸ್ಮರಣೀಯ.... ಅವರು ನಡೆದು ಬಂದ ಜೀವನದ ಹಾದಿಯೆ ಎಲ್ಲಾರಿಗೂ ದಾರಿದೀಪ....

written by: Nithin

Comments