Skip to main content


ಸುದ್ದಿಗೋಷ್ಠಿಯಲ್ಲೇ ವಿಷ ಕುಡಿದ ರೌಡಿಶೀಟರ್‌ ನಾಗ!

ರೌಡಿ ಶೀಟರ್‌ ನಾಗ ಸುದ್ದಿಗೋಷ್ಠಿಯಲ್ಲೇ ವಿಷ ಸೇವನೆ ಮಾಡಿದ ಘಟನೆ ಗುರುವಾರ ನಗರದ ಪ್ರಸ್‌ ಕ್ಲಬ್‌ನಲ್ಲಿ ನಡೆದಿದೆ. ಈ ಸಂಬಂಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರನ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರೌಡಿಶೀಟರ್‌ ಬಾಂಬ್‌ ನಾಗ ಮತ್ತು ಇಬ್ಬರು ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿ ಯನ್ನು  ಶ್ರೀರಾಮಪುರ ಠಾಣೆ ಪೊಲೀಸರು ವಾರದ ಹಿಂದೆ ಬಂಧಿಸಿದ್ದರು. ನಾಗ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಿದ್ಧತೆ ನಡೆಸಿದ್ದ ಎಂದು ಹೇಳಲಾಗಿದೆ.         

short by NP / read more at Udayavani

Comments