Skip to main content


ಮತ್ತೆ ಮೋಡಿ ಮಾಡಲು ಬರುತ್ತಿದೆ ನಾಗರಹಾವು

ಕೆಲವೊಂದು ಸಿನಿಮಾಗಳೇ ಹಾಗೆ, ಎಷ್ಟೇ ಹಳೆಯ ಚಿತ್ರಗಳಾದರೂ ಸಹ ಮತ್ತೆ ಮತ್ತೆ ನೋಡಿಸಿಕೊಳ್ಳುವಂತೆ ಮಾಡುತ್ತವೆ. ಹಾಗೂ ಮರು ಬಿಡುಗಡೆ ಕಾಣುತ್ತವೆ. ಹಳೆಯ ಚಿತ್ರಗಳನ್ನು ಕಲರಿಕರಣ ಮಾಡಿ, ಹೊಸ ತಾಂತ್ರಿಕ ರೀತಿಯ ಸೌಂಡಿಂಗ್ ಅನ್ನು ಅಳವಡಿಸಿ ಮರು ಪ್ರದರ್ಶನ ಮಾಡಲಾಗುತ್ತದೆ. ಅದರಂತೆ ಈಗ ಡಾ. ವಿಷ್ಣುವರ್ಧನ್ ಅಭಿನಯದ ಮೊದಲ ಸಿನಿಮಾ "ನಾಗರಹಾವು' ಆಧುನಿಕ ತಂತ್ಞಜ್ಞಾನದೊಂದೊಗೆ ಮರು ಬಿಡುಗಡೆಯಾಗಲು ರೆಡಿಯಾಗುತ್ತಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ ನಾಗರಹಾವು ಚಿತ್ರ 1973ರಲ್ಲಿ ಬಿಡುಗಡೆಗೊಂಡಿದ್ದು 44 ವರ್ಷಗಳ ನಂತರ ಈಗ 7.1 ಡಿಜಿಟಲ್ ಅಲ್ಟ್ರಾ ಸೌಂಡ್ನೊಂದಿಗೆ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಅಷ್ಟೇ ಅಲ್ಲದೆ ನಾಗರಹಾವು ಚಿತ್ರವನ್ನು ನಿರ್ಮಿಸಿದ್ದ ವೀರಾಸ್ವಾಮಿಯವರ ಪುತ್ರ ಬಾಲಾಜಿ ಅವರೇ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

short by: Nithin / read more at Balkani News