Skip to main content


ಇಂದು ಕೆಕೆಆರ್‌ ವಿರುದ್ಧ ಆರ್‌ಸಿಬಿ, ಪಂಜಾಬ್‌ ವಿರುದ್ಧ ಡೆಲ್ಲಿ ತಂಡಗಳ ನಡುವೆ ಫೈಟ್‌!

ಇಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಸೆಣಸಾಟ ನಡೆಸಲಿದೆ. ಕಳೆದ 10 ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ಟ್ರೋಫಿ ಗೆಲ್ಲಲು ವಿಫಲವಾಗಿರುವ ಕೊಹ್ಲಿ ಪಡೆ ಈ ಸಲದ ಫೇವರೆಟ್‌ ತಂಡವಾಗಿದೆ.ಇನ್ನು ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಸಹ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ. ಉಭಯ ತಂಡಗಳು ಟೂರ್ನಿಯಲ್ಲಿ 20 ಪಂದ್ಯಗಳಲ್ಲಿ 20 ಸಲ ಮುಖಾಮುಖಿಯಾಗಿದ್ದು, ಕೆಕೆಆರ್ 11 ಪಂದ್ಯಗಳಲ್ಲಿ ಗೆಲುವು ಆರ್‌ಸಿಬಿ 9 ರಲ್ಲಿ ಗೆಲುವು ಸಾಧಿಸಿದೆ.ಸಂಜೆ ಮೊಹಾಲಿಯಲ್ಲಿ ನಡೆಯುವ ಪಂದ್ಯದಲ್ಲಿ ಡೆಲ್ಲಿ ಹಾಗೂ ಪಂಜಾಬ್‌ ತಂಡಗಳು ಮೊದಲ ಗೆಲುವಿಗಾಗಿ ಸೆಣಸಾಟ ನಡೆಸಲಿವೆ.

short by: Nithin / read more at Eenadukannada