Skip to main content


ಸ್ಮಿತ್'ಗೆ ಮತ್ತೊಂದು ಅವಮಾನ

ಚೆಂಡು ವಿರೂಪ ಪ್ರಕರಣ ದಲ್ಲಿ ಸಿಕ್ಕಿದ್ದು 1 ವರ್ಷ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವಮಾನದ ಮೇಲೆ ಅವಮಾನ ಅನುಭವಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಪುಸ್ತಕ ಮಳಿಗೆಯೊಂದರಲ್ಲಿ ಸ್ಮಿತ್ ಆತ್ಮ ಚರಿತ್ರೆ ‘ದಿ ಜರ್ನಿ ಸ್ಟೀವ್ ಸ್ಮಿತ್' ಬೆಲೆಯನ್ನು 24 ಆಸ್ಟ್ರೇಲಿಯ ಡಾಲರ್ (ಅಂದಾಜು 1200 ರು.)ರಿಂದ ಕೇವಲ 2 ಆಸ್ಟ್ರೇಲಿಯ ಡಾಲರ್ (ಅಂದಾಜು 100 ರು.)ಗೆ ಇಳಿಸಲಾಗಿದೆ. ಅದು ಪುಸ್ತಕವನ್ನು ‘ಕ್ಲಿಯರ್ ಸೇಲ್’ ವಿಭಾಗದಲ್ಲಿ ಇಡಲಾಗಿದೆ. ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.             

short by Prajwal / read more at Suvarna news

Comments