Skip to main content


ಕಾಂಗ್ರೆಸ್‌ ತೊರೆದು ಜೆಡಿಎಸ್ ಸೇರಲು ಅಂಬರೀಷ್ ನಿರ್ಧಾರ?

ಅರ್ಜಿ ಸಲ್ಲಿಸದಿದ್ದರೂ ಚಿತ್ರನಟ, ಮಾಜಿ ಸಚಿವ ಎಂ.ಎಚ್. ಅಂಬರೀಷ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹೀಗಿದ್ದೂ ಸ್ಪರ್ಧಿಸಲು ಅವರು ಮೀನಾಮೇಷ ಎಣಿಸುತ್ತಿದ್ದು ನಾಮಪತ್ರ ಸಲ್ಲಿಸಿಲ್ಲ, ಹಾಗೂ ಸಲ್ಲಿಕೆಗೂ ಮುಂದಾಗಿಲ್ಲ. ಸದ್ಯಕ್ಕೆ ಅವರು ಕಾಂಗ್ರೆಸ್ ಬಿಡಲಿದ್ದಾರೆ, ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಮಂಡ್ಯದಲ್ಲಿ ಅವರು ಜೆಡಿಎಸ್ ಸೇರುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಂಡ್ಯದಲ್ಲಿ ಅಂಬರೀಷ್ ವಿರೋಧಿ ಅಲೆ ಇದೆ. ಈ ಕಾರಣಕ್ಕೆ ಅವರು ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಸೇರಿ ಸದ್ಯಕ್ಕೆ ಸ್ಪರ್ಧೆಯಿಂದ ಹೊರಗುಳಿಯುವುದು, ಆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನು ನಡೆಸುವ ಗುರಿಯನ್ನು ಅಂಬರೀಷ್ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಮುಂದೆ ಮೇಲ್ಮನೆ ಪ್ರವೇಶಿಸುವ ಉದ್ದೇಶವನ್ನು ಅವರಿಗಿದೆಯಂತೆ.   

short by Pawan / read more at Oneindia

Comments