Skip to main content


ಚೆನ್ನೈ ಸೂಪರ್ ಕಿಂಗ್ಸ್ ನ ಈ ಆಟಗಾರ ರಸ್ತೆ ಬದಿಯಲ್ಲಿ ಕಡಲೆಕಾಯಿ ಮಾರುತ್ತಿದ್ದ.

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ನ ಅತ್ಯದ್ಭುತ ತಂಡಗಳ ಪಟ್ಟಿಯಲ್ಲಿ ನಿಲ್ಲುವ ತಂಡ. ಫಿಕ್ಸಿಂಗ್ ಆರೋಪದಡಿ ಎರಡು ವರ್ಷಗಳ ಬ್ಯಾನ್ ಆಗಿದ್ದು ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ನ ಮೇಲೆ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲ. ಈ ಬಾರಿ ತಂಡದ ಕೆಲವು ಆಟಗಾರರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲುಂಗಿ ನ್ಗಿಡಿ ಎಂಬ ಆಟಗಾರ ತನ್ನ ತಂದೆ ಸಾವನ್ನಪ್ಪಿದ ಕಾರಣ ತನ್ನ ದೇಶಕ್ಕೆ ವಾಪಸ್ ಆಗಿದ್ದಾರೆ. ಇದೀಗ ಸೌತ್ ಆಫ್ರಿಕಾಕ್ಕೆ ಹಿಂದಿರುಗಿರುವ ಈ ಆಟಗಾರ ತನ್ನ ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ಟ್ವೀಟ್ ಒಂದನ್ನು ಮಾಡಿದ್ದಾರೆ. ಈ ಟ್ವೀಟ್ ನಲ್ಲಿ ಅವರು ತಾವು ಚಿಕ್ಕವಯಸ್ಸಿನಲ್ಲಿ ರಸ್ತೆ ಬದಿಯಲ್ಲಿ ತಮ್ಮ ಸಹೋದರನ ಜತೆ ಕಡಲೆಕಾಯಿ ಮಾರುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ಈ ಸ್ಥಿತಿಯಲ್ಲಿ ಇದ್ದ ಒಬ್ಬ ಹುಡುಗ ಇದೀಗ ಪ್ರಸಿದ್ಧ ಕ್ರಿಕೆಟ್ ಆಟಗಾರನಾಗಿ ಬೆಳೆದಿದ್ದು ನಿಜಕ್ಕೂ ಸಂತಸದ ಸಂಗತಿ.        

short by Prajwal / read more at trollhaida

Comments