Skip to main content


ಸೀಜರ್’ ಚಿತ್ರದ ಡೈಲಾಗ್ ಬಗ್ಗೆ ಜನರು ವಿರೋಧ ವ್ಯಕ್ತಪಡಿಸಿದ್ದು ಯಾಕೆ…?

ನಿರ್ದೇಶಕ ವಿನಯ್ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಸೀಜರ್’ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟ ಚಿರಂಜೀವಿ ಸರ್ಜಾ ಅವರು ಜೊತೆಯಾಗಿ ನಟಿಸಿದ್ದು, ಇದೀಗ ಚಿತ್ರದಲ್ಲಿ ರವಿಚಂದ್ರನ್ ಅವರು ಗೋಮಾಂಸದ ಬಗ್ಗೆ ಹೇಳಿರುವ ಡೈಲಾಗ್‌ ಒಂದು ದೀಗ ಭಾರೀ ವಿರೋಧಕ್ಕೆ ಕಾರಣವಾಗಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಅವರು,’ 'ಹಸು ತಲೆ ಕಡಿಯೋದು ಹೆತ್ತ ತಾಯಿ ತಲೆಹಿಡಿಯೋದು ಎರಡೂ ಒಂದೇನೆ' ಎಂದು ಹೇಳಿರುವ ಡೈಲಾಗ್ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಈ ಬಗ್ಗೆ ಮಾತನಾಡಿದ ಸೀಜರ್ ಚಿತ್ರದ ನಿರ್ದೇಶಕ ವಿನಯ್ ಕೃಷ್ಣ ಅವರು,’ ಹೌದು ಚಿತ್ರದ ಟ್ರೈಲರ್‌ನಲ್ಲಿ ಈ ಡೈಲಾಗ್ ಇದೆ. ಇದೇ ರೀತಿಯ ಇನ್ನೂ ಅನೇಕ ಡೈಲಗ್‌ಗಳಿವೆ. ಇದರಲ್ಲಿ ವಿವಾದ ಎಂಬುದು ಏನೂ ಇಲ್ಲ ಎಂದು ಹೇಳಿದ್ದರೆ.

short by Pawan / read more at Webdunia