Skip to main content


ಸಿಎಂ ಸಿದ್ದರಾಮಯ್ಯ ಅರ್ಧ ಗಂಟೆ ಕಾದರೂ ಸಿಗಲಿಲ್ಲ ರೆಬೆಲ್‌ಸ್ಟಾರ್‌!

ಬಿ ಫಾರಂ ಕೈಗೆ ನೀಡಿದರೂ ಇನ್ನೂ ತನ್ನ ಸ್ಫರ್ಧೆಯ ಕುರಿತು ಗುಟ್ಟು ಬಿಟ್ಟುಕೊಡದೆ ಕಾಂಗ್ರೆಸ್‌ ನಾಯಕರಿಗೆ ತೀವ್ರ ತಲೆ ನೋವು ತಂದಿಟ್ಟಿರುವ ಅಂಬರೀಷ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಧಾನಕ್ಕೂ ಸಿಗದೆ ಶಾಕ್‌ ನೀಡಿದ್ದಾರೆ. ಮೈಸೂರಿನ ಸಂದೇಶ್‌ ದಿ ಪ್ರಿನ್ಸ್‌ ಹೊಟೇಲ್‌ನಲ್ಲಿದ್ದ ಅಂಬರೀಷ್‌ ಅವರು ಸಿಎಂ ಮೈಸೂರಿನ ನಿವಾಸಕ್ಕೆ ತೆರಳುತ್ತಾರೆ ಎನ್ನಲಾಗಿತ್ತು ಆದರೆ ಅಲ್ಲಿಗೂ ತೆರಳೆದೆ ನೇರವಾಗಿ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಅಂಬರೀಷ್‌ ಅವರನ್ನು ಭೇಟಿಯಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್‌.ಡಿ.ಕೋಟೆ ಪ್ರಚಾರ ಸಭೆ ಮುಗಿಸಿ ತನ್ನ ಬೇರೆ  ಕಾರ್ಯಕ್ರಮಗಳನ್ನು ಬದಿಗೊತ್ತಿ ಮನೆಗೆ ಆಗಮಿಸಿದ್ದರು ಆದರೆ ಅರ್ಧ ಗಂಟೆಗಳ ಕಾಲ ಕಾದರೂ ಬರದ ಕಾರಣ ಪ್ರಚಾರಕ್ಕಾಗಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

short by Pawan / read more at Udayavani

Comments