Skip to main content


ಬಿಗ್ ಬಾಸ್ ರನ್ನರ್ ಅಪ್ ದಿವಾಕರ್‌ಗೆ ಸಿಕ್ತು ಬಂಪರ್ ಆಫರ್!

ಬಿಗ್ ಬಾಸ್ ಕನ್ನಡ-5 ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೇ ಗದ್ದಲ-ಗಲಾಟೆಯಿಂದ ಗುರುತಿಸಿಕೊಂಡಿದ್ದ ಕಾಮನ್ ಮ್ಯಾನ್ ದಿವಾಕರ್ ಅವರಿಗೆ ಬಂಪರ್ ಆಫರ್ ವೊಂದು ಹುಡುಕಿಕೊಂಡು ಬಂದಿದೆ. ದಿವಾಕರ್ ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದರೂ ‘ಬಿಗ್ ಬಾಸ್’ ಅಂತ ದೊಡ್ಡ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಸ್ಥಾನ ಗಿಟ್ಟಿಸಿದ ಬಳಿಕ ಕೆಂಪು ಕಲರ್ ಸ್ವಿಫ್ಟ್ ಕಾರು ಖರೀದಿ ಮಾಡಿದ್ದರು. ಅಷ್ಟೇ ಅಲ್ಲದೇ ಸಿನಿಮಾಗಳಲ್ಲಿ ನಟಿಸಬೇಕು ಎಂಬ ತಮ್ಮ ಇಚ್ಛೆಯನ್ನ ಹೊರ ಹಾಕಿದ್ದರು. ಈಗ ಚಿತ್ರವೊಂದರ ಪ್ರಮುಖ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶ ದಿವಾಕರ್ ಅವರಿಗೆ ಲಭಿಸಿದೆ.     

    

short by NP / read more at Public TV

Comments