Skip to main content


ಪ್ರಿಯಾ ಪ್ರಕಾಶ್ ಹೊಸ ಫೋಟೋ ವೈರಲ್

ಕಣ್ಸನ್ನೆ ಬೆಡಗಿ, ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾಳೆ. ಪ್ರಿಯಾ ಪ್ರಕಾಶ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ದೂರೊಂದು ದಾಖಲಾಗಿದೆ. ಈ ಮಧ್ಯೆ ಪ್ರಿಯಾ ಪ್ರಕಾಶ್ ಇನ್ಸ್ಟ್ರಾಗ್ರಾಮ್ ನಲ್ಲಿ ತನ್ನ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾಳೆ.ಕೆಲವೇ ಗಂಟೆಗಳ ಹಿಂದೆ ಪ್ರಿಯಾ ಹಾಕಿರುವ ಈ ಫೋಟೋವನ್ನು ಲಕ್ಷಾಂತರ ಮಂದಿ ನೋಡಿದ್ದಾರೆ. ಸಾವಿರಾರು ಕಮೆಂಟ್, ಲಕ್ಷಾಂತರ ಲೈಕ್ ಬಂದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಗಂಟೆ ಹಿಂದೆ ಪ್ರಿಯಾ ಹಾಕಿದ್ದ ಫೋಟೋಕ್ಕೆ 336,069 ಲೈಕ್ಸ್ ಬಂದಿದೆ. ಫೋಟೋದಲ್ಲಿ ಮಗುವೊಂದನ್ನು ಪ್ರಿಯಾ ಎತ್ತಿಕೊಂಡಿದ್ದಾಳೆ. ಅಭಿಮಾನಿಗಳು ಈ ಮಗು ಯಾರು ಎಂದು ಪ್ರಿಯಾಳನ್ನು ಪ್ರಶ್ನೆ ಮಾಡ್ತಿದ್ದಾರೆ. ಸೋಮವಾರ ಪ್ರಿಯಾ ಮತ್ತೆರಡು ಫೋಟೋಗಳನ್ನು ಹಾಕಿದ್ಲು.

short by: Nithin / read more at Kannadadunia


Comments