Skip to main content


ಮೇ ತಿಂಗಳಿನಲ್ಲಿ ಬಜೆಟ್ ಬೆಲೆಯ ಐಫೋನ್ ಲಾಂಚ್..!

ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಆಪಲ್, ಮಾರುಕಟ್ಟೆಯಲ್ಲಿ ಹೊಸದಾಗಿ ಐಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಅದುವೇ ಬಜೆಟ್ ಐಫೋನ್ ಎನ್ನಲಾಗಿದ್ದು, ಎರಡು ವರ್ಷದ ಹಿಂದೆ ಲಾಂಚ್ ಆಗಿದ್ದ ಐಫೋನ್ SE ಮುಂದುವರೆದ ಭಾಗವಾಗಿ ಐಫೋನ್ SE 2 ಅನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದೆ. ಮೂಲಗಳ ಪ್ರಕಾರ ಮುಂದಿನ ತಿಂಗಳು ಅಂದರೆ ಮೇ ಮೊದಲ ವಾರದಲ್ಲಿ ಐಫೋನ್ SE 2 ಅನ್ನು ಲಾಂಚ್ ಮಾಡಲು ಆಪಲ್ ತಯಾರಿಯನ್ನು ನಡೆಸಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ. ಈ ಐಫೋನ್ SE 2ಯಲ್ಲಿ A10 ಪ್ಯೂಷನ್ ಪ್ರೋಸೆಸರ್ ಅನ್ನು ಆಪಲ್ ಅಳವಡಿಸಲಿದೆ ಎನ್ನಲಾಗಿದೆ.            

short by Pawan / more at Gizbot

Comments